24 September 2026 |

ಪ್ರಯಾಣಿಕರ ಅಳಲು, ಕಿರುಚಾಟ, ಪ್ರಾರ್ಥನೆ : ದೆಹಲಿ-ಶ್ರೀನಗರ ಇಂಡಿಗೋ ವಿಮಾನಕ್ಕೆ ಹೊಡೆದ ಆಲಿಕಲ್ಲು

  • 22 May 2025 09:41:42 AM

ದೆಹಲಿಯಿಂದ ಶ್ರೀನಗರಕ್ಕೆ 227 ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನ(6E2142) ಕೆಟ್ಟ ಹವಾಮಾನವನ್ನು ಅನುಭವಿಸಿದ ಪರಿಮಾಣ ಭಯಾನಕ ಘಟನೆ ನಡೆದಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲಾ ಸುರಕ್ಷಿತವಾಗಿ ಕೆಳಗೆ ಇಳಿದ್ದಿದ್ದಾರೆ.

 

ವಿಮಾನದ ಮುಂಭಾಗಕ್ಕೆ ಹಠಾತ್ ಆಲಿಕಲ್ಲು ಬಡಿದ ಪರಿಮಾಣ, ವಿಮಾನ ನಿಯಂತ್ರಣ ತಪ್ಪಿದೆ. ಇದರಿಂದಾಗಿ ವಿಮಾನದ ಒಳಗಡೆ ಅಲ್ಲೋಲ ಕಲ್ಲೋಲವಾಹಿತು. ಪ್ರಯಾಣಿಕರು ಕಿರುಚುವುದು, ಅಳುವುದು ಮತ್ತು ಪ್ರಾರ್ಥಿಸುವುದನ್ನು ತೋರಿಸುವ ಭಯಾನಕ ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

 

ತಲೆ ಮೇಲೆ ಇದ್ದ ಕ್ಯಾಬಿನ್ ಗಳು ಶಬ್ಧ ಮಾಡಿದ್ದವು ಮತ್ತು ಕ್ಯಾಬಿನ್ ಅಸ್ತವ್ಯಸ್ತವಾಗಿ ಕಾಣಿಸಿಕೊಂಡಿತು. ಜನರು ಭಯದಿಂದ ತಮ್ಮ ಆಸನಗಳನ್ನು ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

 

ವಿಮಾನದ ಎದುರು ಮೂತಿಯಂತಿರುವ ಭಾಗಕ್ಕೆ ಹೆಚ್ಚಿನ ಹಾನಿಯಾಗಿದ್ದು, ಇಂತಹ ಭಯಾನಕ ಪರಿಸ್ಥಿತಿಯ ಹೊರತಾಗಿಯೂ, ವಿಮಾನವು ಸಂಜೆ 6:30 ಕ್ಕೆ ಶ್ರೀನಗರದಲ್ಲಿ ಸುರಕ್ಷಿತವಾಗಿ ಇಳಿಯಿತು.“ಎಲ್ಲಾ ವಿಮಾನ ಸಿಬ್ಬಂದಿ ಮತ್ತು 227 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆಯು AOG ಎಂದು ಘೋಷಿಸಿದೆ” ಎಂದು ಅಧಿಕಾರಿ ದೃಢಪಡಿಸಿದ್ದಾರೆ.

 

ಕ್ಯಾಪ್ಟನ್ ಮತ್ತು ಕ್ಯಾಬಿನ್ ಸಿಬ್ಬಂದಿಗೆ ವಿಶೇಷ ಧನ್ಯವಾದಗಳನ್ನು ಪ್ರಯಾಣಿಕರು ಅರ್ಪಿಸಿದ್ದಾರೆ. ವಿಮಾನ ಬಂದ ನಂತರ ವಿಮಾನ ನಿಲ್ದಾಣದ ತಂಡವು ಗ್ರಾಹಕರ ಯೋಗಕ್ಷೇಮ ಮತ್ತು ಸೌಕರ್ಯಕ್ಕೆ ಆದ್ಯತೆ ನೀಡಿ ಅವರಿಗೆ ಸೇವೆ ಸಲ್ಲಿಸಿದೆ.