01 February 2026 | Join group

ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಸೇವೆ ಲಭ್ಯ

  • 23 May 2025 02:56:47 PM

ದಕ್ಷಿಣ ಕನ್ನಡ : ಇತ್ತೀಚಿನ ದಿನಗಳಲ್ಲಿ ಅರೋಗ್ಯ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಮನುಷ್ಯನ ಜೀವನ ಶೈಲಿ ಮತ್ತು ಆಧುನಿಕ ಆಹಾರ ಸೇವನೆ ಕೂಡ ಅರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ.

 

ಕ್ಯಾನ್ಸರ್ ಎನ್ನುವ ಮಾರಕ ಸಮಸ್ಯೆ ಕೂಡ ಹೆಚ್ಚಾಗುತ್ತಿದ್ದು, ಕರ್ನಾಟಕ ಕ್ಯಾನ್ಸರ್ ರೋಗಿಗಳಿಗೆ ಆರೋಗ್ಯ ಇಲಾಖೆ ಒಳ್ಳೆಯ ಸುದ್ದಿ ನೀಡಿದೆ. ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆ ಕೀಮೋಥೆರಪಿ ಕೇಂದ್ರ ಆರಂಭಿಸಿದೆ. 

 

ಈ ಹಿಂದೆ ವರದಿಯಾದ ಪ್ರಕಾರ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೇರಿದಂತೆ ಒಟ್ಟು 36 ಡೇ ಕೇರ್ ಸೆಂಟರ್ ಅಭಿವೃದ್ಧಿಪಡಿಸುವ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಕೀಮೋಥೆರಪಿ ಬಗ್ಗೆ ಯೋಚಿಸಲಾಗಿತ್ತು. ಈ ಬಗ್ಗೆ ರಾಜ್ಯದ ಅರೋಗ್ಯ ಸಚಿವರು ತಿಳಿಸಿದ್ದರು.

 

ಆದರೆ, ಈಗಾಗಲೇ ವಿಜಯಪುರ, ಉಡುಪಿ, ಬಳ್ಳಾರಿ ಧಾರವಾಡ, ಚಿತ್ರದುರ್ಗ, ವಿಜಯನಗರ, ಹಾವೇರಿ, ಬೆಂಗಳೂರು ಗ್ರಾಮೀಣ, ರಾಮನಗರ, ಬೆಂಗಳೂರು ನಗರ, ದಕ್ಷಿಣ ಕನ್ನಡ, ಮೈಸೂರು, ದಾವಣಗೆರೆ, ತುಮಕೂರು, ಕೋಲಾರ, ಬಾಗಲಕೋಟೆಯಲ್ಲಿ ಆರಂಭಿಸಲಾಗಿದೆ. ಇದರ ಜೊತೆಗೆ ವೈದ್ಯಕೀಯ ಆಂಕೊಲಾಜಿಸ್ಟ್ ಗಳ ಜೊತೆ ಸೇವೆ ವೈದ್ಯರು ಮತ್ತು ಇತರ ಸಿಬ್ಬಂದಿಯ ಲಭ್ಯವಿರಲಿದ್ದಾರೆ ಎಂದು ತಿಳಿಸಲಾಗಿದೆ.