23 June 2026 |

ಬಂಟ್ವಾಳದಲ್ಲಿ ಪಿಕಪ್ ಚಾಲಕನ ಕೊಚ್ಚಿ ಬರ್ಬರ ಹ*ತ್ಯೆ

  • 27 May 2025 06:00:36 PM

ಬಂಟ್ವಾಳ : ಬಂಟ್ವಾಳದ ಕೊಳತಮಜಲ್ ಇರಾಕೋಡಿನಲ್ಲಿ ಮೇ 27 ರಂದು ಭೀಕರ ಕೊ*ಲೆಯೊಂದು ನಡೆದಿದೆ. ಅಲ್ಲಿನ ನಿವಾಸಿ ಅಬ್ದುಲ್ ರಹೀಮಾನ್ ಎಂಬಾತನನ್ನು ಕಡಿದು ಕೊ*ಲೆಗೆಯ್ಯಲಾಗಿದೆ ಎಂದು ವರದಿಯಾಗಿದೆ.

 

ಪ್ರಾಥಮಿಕ ವರದಿ ಪ್ರಕಾರ, ರಹೀಮ್ ಮರಳು ಅನ್ಲೋಡ್  ಮಾಡುತ್ತಿದ್ದ ಸಂದರ್ಭದಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ. ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಹೀಮ್ ಗೆ ಕಡಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.


ರಹೀಮ್ ಜೊತೆ ಇದ್ದ ಹನೀಫ್ ಎಂಬಾತನ ಮೇಲು ಹಲ್ಲೆಯಾಗಿದ್ದು ಆತನನ್ನು ಆಸ್ಪತ್ರೆ ಗೆ ಸೇರಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಮುಂದಿನ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯ ನಂತರ ಹೊರಬೀಳಲಿದೆ.