ಮಗುವಿನ ಜೊತೆ ಸೆಲ್ಫಿಗೆ ಯತ್ನ : ಗಂಗಾವತಿ ಸೇತುವೆ ಮೇಲೆ ಸಿಸಿಟಿವಿ ಮೂಲಕ ಗೋಕರ್ಣ ಪೊಲೀಸರ ತಕ್ಷಣದ ಎಚ್ಚರಿಕೆ!

  • 02 Jun 2025 11:30:54 PM

ಗೋಕರ್ಣ: ಮೇ 1ರಂದು ಮಧ್ಯಾಹ್ನ 1:20ರ ಸುಮಾರಿಗೆ, ಪ್ರವಾಸಕ್ಕಾಗಿಯೇ ಗೋಕರ್ಣದ ಗಂಗಾವತಿ ನದಿಯ ಸೇತುವೆ ಬಳಿಗೆ ಬಂದ ದಂಪತಿಗಳು ತಮ್ಮ ಪುಟ್ಟ ಮಗುವಿನೊಂದಿಗೆ ಆ ಸೇತುವೆಯ ಕಟ್ಟೆಯ ಮೇಲೆ ನಿಂತು ಫೋಟೋ ಅಥವಾ ವಿಡಿಯೋ ತೆಗೆದುಕೊಳ್ಳುತ್ತಿದ್ದ ವೇಳೆ, ಅಪಾಯದ ಅಂಚಿಗೆ ತಲುಪಿದ ಭಯಾನಕ ಕ್ಷಣವೊಂದು ನಡೆದಿದೆ.

 

ಮಗುವಿನ ತಂದೆ ತನ್ನ ಕೈಯಲ್ಲಿದ್ದ ಮಗುವನ್ನು ನದಿಗೆ ಇಳಿಯುವ ಕಡೆಯ ಸೇತುವೆ ಗಡಿಯ ಬಳಿ ನಿಲ್ಲಿಸಲು ಯತ್ನಿಸುತ್ತಿದ್ದಾನೆ. ಈ ಎಲ್ಲ ದೃಶ್ಯಗಳನ್ನು ಗಂಗಾವತಿ ಸೇತುವೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ನಿಖರವಾಗಿ ದಾಖಲಿಸುತ್ತಿತ್ತು.

 

ಗೋಕರ್ಣ ಠಾಣೆಯ ಪೊಲೀಸರು ಈ ದೃಶ್ಯವನ್ನು ಲೈವ್ ಮೂಲಕ ಗಮನಿಸಿ, ತಕ್ಷಣವೇ ಕ್ಯಾಮೆರಾದ ಮೂಲಕ ಅಳವಡಿಸಲಾದ ಮೈಕ್ ಮೂಲಕ ಎಚ್ಚರಿಕೆ ನೀಡಿದರು:

 

"ಪ್ರವಾಸಿಗರೇ, ದಯವಿಟ್ಟು ಗಮನಿಸಿ! ನೀವು ಗಂಗಾವತಿ ನದಿಯ ಸೇತುವೆ ಮೇಲೆ ನಿಂತಿದ್ದು ಅಪಾಯಕಾರಿಯಾಗಿದೆ. ನಿಮ್ಮ ಮಗುವನ್ನು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ತೆಗೆದುಕೊಳ್ಳಿ."

 

ಈ ಎಚ್ಚರಿಕೆಯ ಜತೆಗೆ, ಕೂಡಲೇ ಪೊಲೀಸ್ ಸೈರನ್ ನಾದಿಸಿ ಆ ದಂಪತಿಗಳ ಗಮನ ಸೆಳೆಯಲಾಯಿತು. ಪರಿಣಾಮವಾಗಿ ದಂಪತಿಗಳು ತಕ್ಷಣ ಮಗುವನ್ನು ಹಿಂಪಡೆಯಿದರು ಮತ್ತು ಸಾಧ್ಯವಿದ್ದ ಅನಾಹುತವನ್ನು ತಡೆಯಲಾಯಿತು!

 

ಈ ನಿಪುಣವಾಗಿ ನಿರ್ವಹಿಸಿದ ಪೊಲೀಸ್ ಕಾರ್ಯಾಚರಣೆ ಘಟನೆಯು ಸಾರ್ವಜನಿಕ ಮನ್ನಣೆ ಪಡೆಯುತ್ತಿದ್ದು, 'SP Karwar' ಇದನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯ ಸಧ್ಯದಲ್ಲಿ ವೈರಲ್ ಆಗಿದ್ದು, ಗೋಕರ್ಣ ಪೊಲೀಸರ ಕಾರ್ಯಾಚರಣೆಗೆ ಪ್ರಶಂಸೆಗಳ ಸುರಿಮಳೆ ಬರುತ್ತಿದೆ.

 

ಇದು ಕೇವಲ ಎಚ್ಚರಿಕೆಯ ಘಟನೆಯಲ್ಲ, ಗಂಭೀರ ಅಪಾಯವೊಂದನ್ನು ತಡೆದ ಮಾನವೀಯ ಪೊಲೀಸರು ಎಂದು ಜನ ಅಭಿಪ್ರಾಯಪಟ್ಟಿದ್ದಾರೆ. ಇಂಥ ಸಿಸಿಟಿವಿ ವ್ಯವಸ್ಥೆಗಳು ಎಲ್ಲೆಡೆ ಅಳವಡಾದರೆ, ಅನೇಕ ಅಪಾಯಗಳು ಹಾಗೂ ದುರ್ಘಟನೆಗಳನ್ನು ತಡೆಯಲು ಸಾಧ್ಯ.

 

ಎಕ್ಸ್ ನಲ್ಲಿ ಹಾಕಿದ ಪೋಸ್ಟ್ ಮತ್ತು ವೀಡಿಯೋ ನೋಡಿ