ಸಿಎಂ ಮತ್ತು ಡಿಸಿಎಂ ಅನ್ನು ಮೊದಲು ಹೊರಗೆ ಹಾಕಿ : ಕುಮಾರಸ್ವಾಮಿ

  • 06 Jun 2025 06:55:42 PM

ಬೆಂಗಳೂರು : ಯಾವುದೇ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವುದು 11 ಮಂದಿಯ ಸಾವಿಗೆ ನ್ಯಾಯ ದೊರೆಯುವುದಿಲ್ಲ. ಸರಿಯಾದ ತನಿಖೆ ನಡೆಸುವುದರ ಜೊತೆಗೆ ಮುಖ್ಯ ಸ್ಥಾನದಲ್ಲಿರುವವರನ್ನು ಪಟ್ಟದಿಂದ ಕೆಳಗೆ ಇಳಿಸಬೇಕೆಂದು ಕುಮಾರಸ್ವಾಮಿ ಗುಡುಗಿದ್ದಾರೆ.

 

ಈ ಸರಕಾರಕ್ಕೆ ಮರ್ಯಾದೆ ಉಳಿಯಬೇಕಾದರೆ, ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೊದಲು ಅಧಿಕಾರದಿಂದ ಹೊರಗೆ ಹಾಕಬೇಕು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. 

 

ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಿಎಂ ಮತ್ತು ಡಿಸಿಎಂ ತಮ್ಮ ತಮ್ಮ ಪ್ರತಿಷ್ಠೆಗಾಗಿ ಎರಡು ಕಡೆ ಸಂಭ್ರಮಾಚರಣೆ ಮಾಡಿಸಿ 11 ಮಂದಿಯನ್ನು ಬಲಿಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

 

ಘಟನೆ ನಡೆದ ಬೆನ್ನಲ್ಲೇ ಕುಮಾರಸ್ವಾಮಿಯವರು ಸಿಎಂ ಸಿದ್ದರಾಮಯ್ಯರವರು ಡಿಸಿಎಂ ಡಿಕೆ ಶಿವಕುಮಾರ್ ರವರ ಕೈಗೊಂಬೆಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.