ರಸ್ತೆ ದಾಟುತ್ತಿದ್ದ ಮಕ್ಕಳಿಗೆ ಸಹಾಯ ಮಾಡಲು ಹೋಗಿ ಫರಂಗಿಪೇಟೆಯಲ್ಲಿ ಆಟೋ ಚಾಲಕನ ಮೃತ್ಯು

  • 06 Jun 2025 07:41:27 PM

ಮಂಗಳೂರು: ಬಸ್ ಡಿಕ್ಕಿಯಾಗಿ ಆಟೋ ಚಾಲಕನೊಬ್ಬ ಮೃತಪಟ್ಟ ಘಟನೆ ಮಂಗಳೂರಿನ ಫರಂಗಿಪೇಟೆ ಹತ್ತನೇ ಮೈಲ್ ಕಲ್ಲು ಎಂಬಲ್ಲಿ ನಡೆದಿದೆ. 

 

ಅಮ್ಮೆಮಾರ್ ನಿವಾಸಿ 28 ವರ್ಷದ ಝಹಿದ್ ಎಂಬವರು ಮೃತ ಯುವಕ. ರಸ್ತೆ ದಾಟಲು ಹೆದರುತ್ತಿದ್ದ ಮಕ್ಕಳನ್ನು ರಸ್ತೆ ದಾಟಿಸಿ ಹಿಂತಿರುಗುವಷ್ಟರಲ್ಲಿ ಮಂಗಳೂರಿನಿಂದ ಬರುತ್ತಿದ್ದ KSRTC ಬಸ್ ಡಿಕ್ಕಿಯಾಗಿ ಝಹಿದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 

 

ಮೃತ ಯುವಕನ ತಂದೆ ಈ ಹಿಂದೆಯೇ ತೀರಿಹೋಗಿದ್ದು, ತಾಯಿ ಹಾಗೂ ಮೂರು ಸಹೋದರರು ಮತ್ತು ಸಹೋದರಿಯರನ್ನು ಅಗಲಿದ್ದಾರೆ.