ಉತ್ತರಾಖಂಡ: ಮಕ್ಕಳು ದಾರಿತಪ್ಪುತ್ತಿರುವ ಈ ಸಮಾಜದಲ್ಲಿ, ತನ್ನ ಮಗಳನ್ನೇ ಇತರರ ಲೈಂಗಿಕ ಶೋಷಣೆಗೆ ಒಳಪಡಿಸಲು ಸಹಕರಿಸಿದ ದುಷ್ಟ ತಾಯಿ ಉತ್ತರಾಖಂಡದ ಹರಿದ್ವಾರದಲ್ಲಿ ಬಂಧಿತೆಯಾಗಿದ್ದಾಳೆ. ಹರಿದ್ವಾರದ ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ಅಧ್ಯಕ್ಷೆ ಅನಾಮಿಕ ಶರ್ಮ ಈ ಕೃತ್ಯ ಎಸಗಿದ ಮಹಿಳೆ.
ಈಕೆ ತನ್ನ 13 ವರ್ಷದ ಮಗಳ ಮೇಲೆ ತನ್ನ ಪ್ರಿಯಕರನಾದ ಸುಮಿತ್ ಪತ್ವಾಲ್ ಮತ್ತು ಆತನ ಸ್ನೇಹಿತ ಶುಭಂನಿಂದ ಹಲವು ಬಾರಿ ಅತ್ಯಾ*ಚಾರ ಮಾಡಿಸಿದ್ದಾಳೆ. ಗಂಡನಿಂದ ಬೇರ್ಪಟ್ಟಿದ್ದ ಈ ಮಹಿಳೆ ತನ್ನ ಮಗಳನ್ನು ಗಂಡನ ಜೊತೆ ಬಿಟ್ಟಿದ್ದಳು. ಅಪ್ಪನೊಂದಿಗೆ ಬೆಳೆಯುತ್ತಿದ್ದ ಆ ಬಾಲಕಿ ಅಪರೂಪಕ್ಕೆ ತನ್ನ ತಾಯಿ ಬಳಿ ಬರುತ್ತಿದ್ದಲ್ಲಂತೆ.
ಇಂತಹ ಸಂದರ್ಭದಲ್ಲಿ ತನ್ನ ಪ್ರಿಯಕರನಾದ ಸುಮಿತ್ ಪತ್ವಾಲ್ ನ ಹೋಟೆಲ್ ಗೆ ಕರೆದುಕೊಂಡು ಹೋಗಿ ಮಗಳನ್ನು ಅತ್ಯಾ*ಚಾರ ಎಸಗಿಸುತ್ತಿದ್ದಳಂತೆ. ಸದ್ಯ ಪೊಲೀಸರು ಈ ಮೂವರನ್ನು ಬಂಧಿಸಿದ್ದು, ಪ್ರಕರಣದ ರೂವಾರಿ ಮಹಿಳೆ ಅನಾಮಿಕ ಶರ್ಮ ನನ್ನು ಬಿಜೆಪಿಯಿಂದ ತಕ್ಷಣ ವಜಾ ಮಾಡಲಾಗಿದೆ.