ಮಂಗಳೂರಿನ ಯೆಯ್ಯಾಡಿಯಲ್ಲಿ ಯುವಕನಿಗೆ ಚೂ*ರಿ ಇರಿತ : ಸ್ಥಿತಿ ಗಂಭೀರ.!

  • 07 Jun 2025 05:41:30 PM

ಮಂಗಳೂರು: ನಗರದ ಯೆಯ್ಯಾಡಿಯಲ್ಲಿ ಯುವಕನೊಬ್ಬನಿಗೆ ಚಾಕು ಇರಿದ ಪ್ರಕರಣ ನಡೆದಿದೆ. ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಇರಿತಕ್ಕೆ ಒಳಗಾದ ಯುವಕನ ಹೆಸರು ಕೌಶಿಕ್ ಎಂದು ವರದಿಯಾಗಿದೆ.

 

ಹಳೆಯ ದ್ವೇಷದ ಹಿನ್ನಲೆಯಲ್ಲಿ ಬೃಜೇಶ್ ಶೆಟ್ಟಿ ಮತ್ತು ಗಣೇಶ್ ಬಿಜೈ ಎಂಬವರು ಚಾಕು ಇರಿದ ಆರೋಪಿಗಳು ಎಂದು ತಿಳಿದುಬಂದಿದ್ದು, ಚೂರಿ ಇರಿತಕ್ಕೆ ಒಳಗಾದ ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

 

ತಿಂಗಳ ಹಿಂದೆ ಬೃಜೇಶ್ ಶೆಟ್ಟಿ ಕೌಶಿಕ್ ಗೆ ಹಲ್ಲೆ ನಡೆಸಿದ್ದ ಮತ್ತು ಇದಕ್ಕೆ ಪ್ರತಿಕಾರವಾಗಿ ಕೌಶಿಕ್ ಬೃಜೇಶ್ ಗೆ ಹೊಡೆದಿದ್ದ ಎನ್ನಲಾಗಿದೆ. ಈ ದ್ವೇಷದ ಹಿನ್ನಲೆಯಲ್ಲಿ ನಿನ್ನೆ ಮತ್ತೊಮ್ಮೆ ಕೌಶಿಕ್ ಮೇಲೆ ದಾಳಿಯಾಗಿದ್ದು, ಹೊಟ್ಟೆ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದೆ.

 

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.