01 February 2026 | Join group

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬೇರೆ ಕಡೆಗೆ ಶಿಫ್ಟ್ ಆಗಲಿದೆಯೇ?

  • 10 Jun 2025 01:26:28 PM

ಇತ್ತೀಚಿಗೆ ನಡೆದ ಕಾಲ್ತುಳಿತ ಘಟನೆಯಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಈಗ ಬಾರಿ ಸುದ್ದಿಯಲ್ಲಿದೆ. ಆರ್ ಸಿ ಬಿ ತಂಡದ ಐಪಿಎಲ್ ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ನಡೆದ ಕಾಲ್ತುಳಿತದ ಘಟನೆ ಕಣ್ಮುಂದೆ ಇರುವಾಗಲೇ ಚಿನ್ನಸ್ವಾಮಿ ಸ್ಟೇಡಿಯಂನ್ನು ಸ್ಥಳಾoತರಗೊಳಿಸುವ ಕೂಗು ಕೇಳಿ ಬರುತ್ತಿದೆ.

 

ಬೆಂಗಳೂರು ರಾಜಧಾನಿಯ ಹೃದಯ ಭಾಗದಲ್ಲಿ ಇರುವ ಚಿನ್ನಸ್ವಾಮಿ ಸ್ಟೇಡಿಯಂನ್ನು ಬೇರೆ ಕಡೆಗೆ ಸ್ಥಳಾಂತರಗೊಳಿಸಿ ಎಂದು ಕಬ್ಬನ್ ಪಾರ್ಕ್ ವರ್ಕರ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಉಮೇಶ್ ಎಂಬವರು ಪ್ರಧಾನಿ ಮೋದಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

 

ಚಿನ್ನಸ್ವಾಮಿ ಸ್ಟೇಡಿಯಂನ್ನು ವಶಪಡಿಸಿಕೊಳ್ಳಿ, ನಗರದ ಹೃದಯ ಭಾಗದಲ್ಲಿ ಗ್ರೌಂಡ್ ಬೇಕಾಗಿಲ್ಲ. ಏರ್ಪೋರ್ಟ್ ಪಕ್ಕದಲ್ಲಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (KSCA) ಗೆ ಸೇರಿದ 100 ಎಕರೆ ಜಾಗ ಇದೆ. ಅಲ್ಲಿಗೆ ಸ್ಥಳಾಂತರ ಮಾಡಿ ಎಂದು ಪತ್ರ ಬರೆಯಲು ಮುಂದಾಗಿದ್ದಾರೆ.

 

ಇದರ ಜೊತೆಗೆ ಕಂಠೀರವ ಸ್ಟೇಡಿಯಂ ಕೂಡ ಬೇರೆ ಕಡೆಗೆ ಸ್ಥಳಾಂತವಾಗಬೇಕೆಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆದಿದ್ದು, ಅವರು ಕೋರಿಕೆಯನ್ನು ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

 

ಬಲ್ಲವರ ಪ್ರಕಾರ, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಸಿಗದೇ ಇದ್ದರೂ, ಈ ಎರಡು ಸ್ಟೇಡಿಯಂಗಳ ಸ್ಥಳಾಂತರದ ಸಾಧ್ಯತೆ ಹೆಚ್ಚು ಎನ್ನುತ್ತಿದ್ದಾರೆ.