ಕೋಳಿ ಅಂಕಕ್ಕೆ ಹೋಗುವವರಿಗೆ ಸಿಹಿ ಸುದ್ದಿ: ಕೋಳಿ ಅಂಕದ ಬಗ್ಗೆ ಸದನದಲ್ಲಿ ಚರ್ಚೆ.! ಕಟ್ಟದ ಕೋಳಿ ಬಹಳ ರುಚಿಯಾಗಿರುತ್ತೆ ಎಂದು ಡಿಕೆಸಿಗೆ ತಿಳಿಸಿದ ಶಾಸಕ ಸುನಿಲ್ ಕುಮಾರ್

  • 07 Mar 2025 01:15:47 AM

ಸದನದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಮಾರಿಪೂಜೆ ಅಥವಾ ಇನ್ನಿತರ ಹಬ್ಬಗಳಲ್ಲಿ ಕೋಳಿ ಅಂಕ ನಡೆಸುವುದು ಬಹಳ ಮುಖ್ಯ. ಈ ರೀತಿಯ ಸಂಸ್ಕೃತಿ ಪೂರ್ವಜರ ಕಾಲದಿಂದ ಬಂದಿದ್ದು ಕೋಳಿ ರಕ್ತ ಕೊಡುವುದು ಸಂಪ್ರದಾಯ ಮತ್ತು ಅದಕ್ಕೆ ಭಾವನಾತ್ಮಕ ಸಂಬಂಧವಿದೆ ಎಂದು ತಿಳಿಸಿದರು.

 

ಆದ್ದರಿಂದ ಯಾವುದೇ ಜೂಜುಗಳಿಗೆ ಅವಕಾಶ ಕೊಡದೆ, ಕೋಳಿ ಅಂಕ ನಡೆಸಲು ಈ ರೀತಿ ಹೇಗೆ ಹಿಂದಿನ ಸರಕಾರಗಳು ಅನುಮತಿ ಕೊಡುತ್ತಿತ್ತು ಅದೇ ರೀತಿ ಅನುಮತಿ ನೀಡಬೇಕು ಎಂದು ಮಾನ್ಯ ಸ್ಪೀಕರ್ ಯು.ಟಿ ಖಾದರ್ ರವರಿಗೆ ಮನವಿ ಮಾಡಿದರು.

 

ಅದಕ್ಕೆ ಪ್ರತಿ ಉತ್ತರ ನೀಡಿದ ಸ್ಪೀಕರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ, ನಿಮ್ಮ ಉಡುಪಿ ಜಿಲ್ಲೆಯಲ್ಲಿ ಸಮಸ್ಯೆ ಇದೆಯೇ ಎಂದು ಕೇಳಿದರು. ಅದಕ್ಕೆ ಯಶಪಾಲ್ ಸುವರ್ಣ ನಮ್ಮಲ್ಲಿ ಸಮಸ್ಯೆ ಇದೆ ಎಂದು ಉತ್ತರಿಸಿದರು. ಆವಾಗ ತಕ್ಷಣ ಡಿ.ಕೆ ಶಿವಕುಮಾರ್ ಈ ವಿಷಯ ಆಮೇಲೆ ಮಾತಾಡೋಣ ಎಂದು ಮುಂದಿನ ವಿಷಯಕ್ಕೆ ಹೋಗಲು ಸೂಚನೆ ನೀಡಿದರು.

 

ಅದಕ್ಕೆ ಉತ್ತರಿಸಿದ ಸ್ಪೀಕರ್ ಇದು ಇಂಪಾರ್ಟೆಂಟ್ ಪಾಯಿಂಟ್, ಧಾರ್ಮಿಕ ಸಂಪ್ರದಾಯದ ಪ್ರಕಾರ ಕೋಳಿ ಅಂಕ ನಡೆಯುವ ಕ್ರಮ ಹಿಂದಿನಿಂದ ಬಂದಿದೆ, ಅದಕ್ಕೆ ಸರಿಯಾದ ವ್ಯವಸ್ಥೆ ಮಾಡದೇ ಇದ್ದರೆ, ಒಂದೊಂದು ಸ್ಟೇಷನ್ ನಲ್ಲಿ ಒಂದು ಒಂದು ರೀತಿ ಮಾಡುತ್ತಿದ್ದಾರೆ. ಆದ್ದರಿಂದ ಜೂಜಿಗೆ ಯಾವುದೇ ಅವಕಾಶ ಕೊಡದೆ ಆ ಸಂಪ್ರದಾಯಿಕವಾಗಿ ನಡೆಯುತ್ತಾ ಬರುವ ಕೋಳಿ ಅಂಕಕ್ಕೆ ಬೇಕಾದ ಕಾನೂನು ಮಾಡಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.

 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಬ್ಲಮ್ ಇಲ್ಲ ಆದರೆ ಉಡುಪಿಯಲ್ಲಿ ಪ್ರಾಬ್ಲಮ್ ಇದೆ, ಒಂದೊಂದು ಸ್ಟೇಷನ್ ಗೆ ಒಂದೊಂದು ಎಸ್ಐ ಬಂದು ಅವರಿಗೆ ಬೇಕಾದ ಕಾನೂನು ಅನುಷ್ಠಾನಗೊಳಿಸುತ್ತಾರೆ ಎಂದರು. ಇದರ ಮದ್ಯೆ ಶಾಸಕ ಸುನಿಲ್ ಕುಮಾರ್ ಕಾರ್ಕಳ ಎದ್ದು ನಿಂತು, ಸರ್ ಅಧ್ಯಕ್ಷರೇ, ನಮ್ಮಲ್ಲಿ ಹುಣ್ಣಿಮೆ, ಅಮಾವಾಸ್ಯೆ, ಜಾತ್ರೆಗಳು ಆದ ನಂತರ ಸಾಂಪ್ರದಾಯಕವಾಗಿ ಅದರ ಮಾರನೇ ದಿನ ಕೋಳಿ ಅಂಕ ಮಾಡಬೇಕೆಂದು ಬಹಳ ವರ್ಷಗಳಿಂದ ನಡ್ಕೊಂಡು ಬರ್ತಾ ಇರುವ ಸಂಪ್ರದಾಯ, ಈಗ ಹೊಸದಾಗಿ ನಮ್ಮ ಜಿಲ್ಲೆಯಲ್ಲಿ ಅನುಮತಿಯನ್ನು ಕೊಡ್ತಾ ಇಲ್ಲ.

 

ಹಾಗಾಗಿ ಕೋಳಿ ಅಂಕಕ್ಕೆ ಸಂಬಧಪಟ್ಟಗೆ ಸ್ವಲ್ಪ ಗಮನಕೊಟ್ಟು ಈ ವಿಚಾರವನ್ನು ಪರಿಗಣನೆಗೆ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು. ಕೋಳಿ ಅಂಕ ನಡೆದು ಸತ್ತು ಹೋದ ಕೋಳಿ ಬಹಳ ರುಚಿ ಇದೆ, ಈ ಕೋಳಿಗಿಂತ ಕಟ್ಟದ ಕೋಳಿಯ ರುಚಿ ಜಾಸ್ತಿ, ನೀವು ಒಂದು ಸರಿ ಬಂದರೆ ನಾನು ತೋರಿಸಿ ಕೊಡುತ್ತೇನೆ ಎಂದು ಡಿ.ಕೆ. ಶಿವಕುಮಾರ್ ರವರಿಗೆ ಒತ್ತಾಯ ಮಾಡಿದರು.