ದಕ್ಷಿಣ ಕನ್ನಡದಲ್ಲಿ ಮತ್ತೊಮ್ಮೆ 'ರೆಡ್ ಅಲರ್ಟ್': ಶಾಲೆಗಳಿಗೆ ಇನ್ನೆರಡು ದಿವಸ ರಜೆ ಘೋಷಣೆ?

  • 12 Jun 2025 10:19:33 AM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಅಂಗನವಾಡಿ ಮತ್ತು ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜೂನ್ 12 ರಿಂದ 15 ರ ವರೆಗೆ ಅತಿಯಾಗಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ.

 

ತಗ್ಗು ಪ್ರದೇಶಗಳಿಗೆ ಅಥವಾ ನೀರು ನಿಂತಿರುವ ಜಾಗಗಳಿಗೆ ಮಕ್ಕಳು ಹೋಗದಂತೆ ಪೋಷಕರು ಖಚಿತಪಡಿಸಿಕೊಳ್ಳಬೇಕು, ಮೀನುಗಾರರು ನೀರಿಗೆ ಇಳಿಯಬಾರದು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಜಾಗರೂಕರಾಗಬೇಕು ಎಂದು ತಿಳಿಸಲಾಗಿದೆ.

 

ಮಳೆಯ ಆರ್ಭಟ ಮುಂದುವರಿದರೆ, ಶನಿವಾರದವರೆಗೆ (ಜೂನ್ 14) ರವರೆಗೆ ಅಂಗನವಾಡಿ ಮತ್ತು ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆಯಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಪೋಷಕರು ಮತ್ತು ಮಕ್ಕಳು ಎಚ್ಚರಿಕೆಯಿಂದ ಇರಬೇಕಾಗಿ ಸೂಚಿಸಲಾಗಿದೆ.