23 June 2026 |

ಕೋಮು ನಿಗ್ರಹ ಪಡೆ ರೆಡಿ : ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ 248 ಪೊಲೀಸರ ನೇಮಕ!

  • 12 Jun 2025 08:39:39 PM

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಇತೀಚೆಗೆ ನಡೆದ ಕೋಮು ಕೃತ್ಯಗಳನ್ನು ಪರಿಗಣನೆಗೆ ತೆಗೆದುಕೊಂಡು ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಕೋಮು ಸಂಘರ್ಷವನ್ನು ಹತ್ತಿಕ್ಕಲು ಕೋಮು ನಿಗ್ರಹ ಪಡೆ ತಯಾರಿಸಲಾಗಿದೆ. ಈ ಪೊಲೀಸ್ ಪಡೆಯಲ್ಲಿ 248 ಪೊಲೀಸರನ್ನು ನೇಮಕ ಮಾಡಿದ್ದು, ಹೊಸದಾಗಿ ನೇಮಕಗೊಂಡ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಇದರ ನೇತೃತ್ವ ವಹಿಸಿದ್ದಾರೆ.

 

ಮಂಗಳೂರಿನ ಬಜ್ಪೆಯಲ್ಲಿ ಸುಹಾಸ್ ಶೆಟ್ಟು ಕೊ*ಲೆಯಾದ ನಂತರ ಪರಿಸ್ಥಿತಿ ವಿಪೋಕಕ್ಕೆ ತಿರುಗಿದ್ದು, ರಾಜ್ಯದ ಗೃಹ ಮಂತ್ರಿ ಡಾ ಜಿ. ಪರಮೇಶ್ವರ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿ ರಾಜ್ಯದ ಕರಾವಳಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕೋಮು ನಿಗ್ರಹ ದಳ (ಕಮ್ಯುನಲ್ ಟಾಸ್ಕ್ ಫೋರ್ಸ್) ಎಂಬ ಪೊಲೀಸ್ ತಂಡ ಕಟ್ಟಿ, ಕೋಮು ಗಲಾಟೆಗಳನ್ನು ಹತ್ತಿಕ್ಕಲಾಗುವುದು ಎಂದಿದ್ದರು.

 

ಇದೀಗ ಈ ಯೋಜನೆಯನ್ನು ಕಾರ್ಯಗತಕ್ಕೆ ತಂದಿದ್ದು, ಮೂವರು ಇನ್ ಸ್ಪೆಕ್ಟರ್ ಗಳನ್ನೂ ಒಳಗೊಂಡಂತೆ, 248 ಪೊಲೀಸ್ ಸಿಬ್ಬಂದಿಗಳ ತಂಡವನ್ನು ರಚಿಸಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಎಂ ಎ ಸಲೀಮ್ ಆದೇಶ ಹೊರಡಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಯವರನ್ನು ಈ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.