23 June 2026 |

'ಕಂಡಲ್ಲಿ ಗುಂಡು' ಆದೇಶ ನೀಡಿದ ಅಸ್ಸಾಂ ಮುಖ್ಯಮಂತ್ರಿ: ದೇವಸ್ಥಾನದ ಬಳಿ ಮಾಂಸ ಪತ್ತೆಯಾದ ಘಟನೆಯ ವಿರುದ್ಧ ಕ್ರಮ

  • 14 Jun 2025 01:11:51 AM

ಗುವಾಹಟಿ: ಅಸ್ಸಾಂನ ಧುಬ್ರಿ ಎಂಬಲ್ಲಿ ಬಕ್ರೀದ್ ದಿನ ಹನುಮಂತನ ದೇವಸ್ಥಾನದ ಬಳಿ ಹಸುವಿನ ರುಂಡ ಮತ್ತು ದನದ ಮಾಂಸ ಬಿಸಾಡಿದ ಘಟನೆ ನಡೆದಿತ್ತು. ಇದರಿಂದಾಗಿ ಜಿಲ್ಲೆಯಲ್ಲಿ ಕೋಮು ಉದ್ನಿಗ್ನತೆ ವಾತಾವರಣ ಸೃಷ್ಟಿಯಾಗಿತ್ತು ಹಾಗೂ ನಿಷೇದಾಜ್ಞೆಯನ್ನು ಕೂಡ ಜಾರಿಗೊಳಿಸಲಾಗಿತ್ತು.

 

ಇದೀಗ ಅಸ್ಸಾಂ ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ 'ಕಂಡಲ್ಲಿ ಗುಂಡಿಕ್ಕಲು' ಆದೇಶ ಹೊರಡಿಸಿದೆ. ಅಸ್ಸಾಂ ಮುಖ್ಯಮಂತ್ರಿ ಹೇಮಂತ ಬಿಸ್ವ 'ಶರ್ಮ ನಾವು ಈ ರೀತಿಯ ವಿಕೃತಿ ಮೆರೆದಿದ್ದವರನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ' ಎಂಬ ಎಚ್ಚರಿಗೆ ನೀಡಿದ್ದಾರೆ.

 

ಹಿಂದೂ ದೇವಾಲಯಗಳನ್ನು ಅಥವಾ ನಾಮಘರ್ ಗಳನ್ನು ಅಪವಿತ್ರಗೊಳಿಸಿದ ಶಕ್ತಿಗಳನ್ನು ನಿರ್ಮೂಲನ ಮಾಡಲು ಬಿಜೆಪಿ ಸರಕಾರ ಅಂತವರ ವಿರುದ್ಧ ಶೂನ್ಯ ಸಹಿಷ್ಣುತೆ ಮತ್ತು ತಪ್ಪಿಸ್ಥತರನ್ನು ಕಂಡಲ್ಲಿ ಗುಂಡಿಕ್ಕಿಲು ಆದೇಶ ನೀಡಿದೆ.

 

ಕಾನೂನು ಮತ್ತು ಸುವ್ಯವಸ್ಥೆಯನ್ನು ಹತೋಟಿಯಲ್ಲಿಡಲು, ಧುಬ್ರಿಯಲ್ಲಿ ಕ್ಷಿಪ್ರ ಕಾರ್ಯಪಡೆ ಮತ್ತು ಕೇಂದ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದ್ದು, ರಾತ್ರಿಯಲ್ಲಿ ಹೊರಗೆ ಬಂದು ಕಲ್ಲು ಎಸೆಯುವವರನ್ನು ಬಂಧಿಸಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಮಂತ ಬಿಸ್ವ ಶರ್ಮ ಕಠಿಣವಾಗಿ ಹೇಳಿದ್ದಾರೆ.