ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮಡಿದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ರೂ. 6 ಕೋಟಿ ನೀಡಿದ ಕೆಎಂಸಿ(KMC) ಹಳೆ ವಿದ್ಯಾರ್ಥಿ ಡಾ. ಶಂಶೀರ್ ವಯಾಲಿಲ್

  • 18 Jun 2025 05:47:38 PM

ಅಹಮದಾಬಾದ್ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದ ದುರಂತದಲ್ಲಿ ಮಡಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ಉದ್ಯೋಗಪತಿ ಮತ್ತು ದಾನಿಯಾದ ಡಾ. ಶಂಶೀರ್ ವಯಾಲಿಲ್ ರವರು ರೂ. 6 ಕೋಟಿ ನೀಡಿದ್ದಾರೆ.

 

ಡಾ. ಶಂಶೀರ್ ವಯಾಲಿಲ್ ರವರು 1994 ರ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಬ್ಯಾಚ್ ನ ಹಳೆ ವಿದ್ಯಾರ್ಥಿಯಾಗಿದ್ದು, ಗಲ್ಫ್ ದೇಶಗಳಲ್ಲಿ ಯಶಸ್ವೀ ಉದ್ಯೋಗಪತಿಯಾಗಿದ್ದರೆ.

 

'ನಾನು ಮೆಸ್ ಮತ್ತು ಹಾಸ್ಟೆಲ್‌ನ ದೃಶ್ಯಗಳನ್ನು ನೋಡಿದೆ, ಮತ್ತು ಅದು ನಿಜವಾಗಿಯೂ ನನ್ನನ್ನು ಬೆಚ್ಚಿಬೀಳಿಸಿದೆ. ಅದು ನನಗೆ ನನ್ನ ಹಳೆ ದಿನಗಳನ್ನು ನೆನಪಿಸಿದೆ, ಕಾರಿಡಾರ್‌ಗಳು, ಹಾಸಿಗೆಗಳು, ನಗು, ಒತ್ತಡವನ್ನು ನೆನಪಿಸಿತು...ಆ ಲೋಕಕ್ಕೆ ವಾಣಿಜ್ಯ ವಿಮಾನವೊಂದು ಅಪ್ಪಳಿಸುತ್ತದೆ ಎಂದು ಯಾರೂ ನಿರೀಕ್ಷಿಸುವುದಿಲ್ಲ' ಎಂದು ತನ್ನ ಹಳೆಯ ದಿನಗಳನ್ನು ನೆನಪಿಸಿಕೊಂಡರು.

 

2010 ರ ಮಂಗಳೂರಿನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದಲ್ಲಿ ಮಾಡಿದವರಿಗೂ ಡಾ. ಶಂಶೀರ್ ವಯಾಲಿಲ್ ನೆರವು ನೀಡಿದ್ದರು. ಕೆಎಂಸಿಸಿ ಆಸ್ಪತ್ರೆಯ ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ಹಾಕಿದ್ದಾರೆ.