01 February 2026 | Join group

ಮಧ್ಯರಾತ್ರಿ RSS ಮುಖಂಡನ ಮನೆಗೆ ಭೇಟಿ : ಎಸ್ಪಿಗೆ ಹೈ ಕೋರ್ಟ್ ನೋಟೀಸ್

  • 20 Jun 2025 05:22:06 PM

ಮಂಗಳೂರು, ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ಭೀಕರತೆ ಇರುವ ಸಂದರ್ಭದಲ್ಲಿ ಪೊಲೀಸರು ಜಿಲ್ಲೆಯ ಕೆಲ ಹಿಂದೂ ಕಾರ್ಯಕರ್ತರ ಮತ್ತು ಆರ್ ಎಸ್ ಎಸ್ ನಾಯಕರುಗಳ ಮನೆಗೆ ಮಧ್ಯರಾತ್ರಿ ಭೇಟಿ ನೀಡಿ ಫೋಟೋ ತೆಗೆಸಿಕೊಂಡು GPS ಆಫ್ ಲೋಡ್ ಮಾಡಿದ್ದ ಪ್ರಕರಣ ನಡೆದಿತ್ತು.

 

ಈ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆರ್ ಎಸ್ ಎಸ್ ಮುಖಂಡ ಯು. ಜಿ ರಾಧಾ ಉಪ್ಪಿನಂಗಡಿ ರವರ ಮನೆಗೆ ತೆರಳಿದ್ದ ಪ್ರಕರಣ ಈಗ ದಾಳಿ ನಡೆಸಿದ ಎಸ್ಪಿಗೆ ಸಂಕಟ ತಂದಿದೆ.

 

ಯಾವುದೇ ಕಾರಣವಿಲ್ಲದೆ ಜೂನ್ 1ರ ಮಧ್ಯರಾತ್ರಿ ಯು. ಜಿ ರಾಧಾ ಉಪ್ಪಿನಂಗಡಿ ಮನೆಗೆ ಎಸ್ಪಿ ಅರುಣ್ ನೇತೃತ್ವದ ತಂಡ ಭೇಟಿ ನೀಡಿ ಮನೆಯಲ್ಲಿದ್ದ ಯು. ಜಿ ರಾಧಾ ರವರನ್ನು ಮತ್ತು ಮನೆಯವರನ್ನು ಎಬ್ಬಿಸಿ ಫೋಟ್ ತೆಗೆದು GPS ಅಪ್ಲೋಡ್ ಮಾಡಿಕೊಂಡಿದ್ದರು. ಪೊಲೀಸರ ಭೇಟಿ ಮೊಬೈಲ್ ಕ್ಯಾಮೆರಾಗಳಲ್ಲಿ ಕೂಡ ಸೆರೆಯಾಗಿತ್ತು.

 

ಪೊಲೀಸರ ಈ ಅನೈತಿಕ ಭೇಟಿಗೆ ಪರಿಹಾರ ಕೋರಿ ಇವರು ಹೈ ಕೋರ್ಟ್ ಮೆಟ್ಟಲೇರಿದ್ದರು. 20 ಲಕ್ಷ ಮಾನನಷ್ಟ ಮೊಕದ್ದಮೆ ಕೂಡ ಹಾಕಿದ್ದರು. ಯು. ಜಿ ರಾಧಾರವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಹೈ ಕೋರ್ಟ್ ಎಸ್ಪಿಗೆ ನೋಟೀಸ್ ಜಾರಿ ಮಾಡಿದೆ.

 

ಇದೀಗ ಪೊಲೀಸರ ದಾಳಿ ಬಗ್ಗೆ ಸೂಕ್ತ ದಾಖಲೆ ಸಲ್ಲಿಸುವಂತೆ ಹೈ ಕೋರ್ಟ್ ತಾಕೀತು ಮಾಡಿದೆ. ಕಾನೂನು ಹೊರತಾಗಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಆದೇಶ ನೀಡಿದೆ. ಈ ರೀತಿಯ ದಾಳಿಗೆ ಕಾರಣ ಕೇಳಿ ದಕ್ಷಿಣ ಕನ್ನಡ ಎಸ್ಪಿಗೆ ಹೈ ಕೋರ್ಟ್ ನೋಟೀಸ್ ನೀಡಿದೆ.