ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ: ರೈಲು ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ!

  • 21 Jun 2025 11:44:21 AM

ಸಕಲೇಶಪುರ: ರಾಜ್ಯದ ಕೆಲವೆಡೆ ಭಾರಿ ಮಳೆಯಿಂದ ಹಲವಾರು ಅವಘಡಗಳು ಸಂಭವಿಸುತ್ತಿದೆ. ಸಕಲೇಶಪುರದ ಯಡೆಕುಮಾರಿ ಎಂಬಲ್ಲಿ ರೈಲ್ವೆ ಹಳಿಗೆ ದೊಡ್ಡ ಬಂಡೆಗಳು ಬಿದ್ದ ಪ್ರಕರಣ ವರದಿಯಾಗಿದೆ.

 

ರೈಲ್ವೆ ಹಳಿ ಮೇಲೆ ಭಾರೀ ಗಾತ್ರದ ಬಂಡೆ ಬಿದ್ದ ಪರಿಣಾಮ ರೈಲ್ವೆ ಹಳಿಗಳು ಹಾನಿಯಾಗಿದೆ. ಭೂಕುಸಿತವಾದ ಕಾರಣ ಎತ್ತರದ ಗುಡ್ಡದಿಂದ ಬಂಡೆ ಜಾರಿ ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದಿದೆ. ಇದರಿಂದಾಗಿ ಬೆಂಗಳೂರು - ಕಣ್ಣೂರು ಘಾಟ್, ಬೆಂಗಳೂರು-ಮುರುಡೇಶ್ವರ ಮಾರ್ಗದ ರೈಲು ಸಂಚಾರ ಸ್ಥಗಿತವಾಗಿದೆ.

 

ಲೋಕೋ ಪೈಲಟ್ ರವರ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ. ಕೆಲ ದೂರ ಹಿಂದೆ ರೈಲು ನಿಲ್ಲಿಸಿದರ ಪರಿಣಾಮ ಯಾವುದೇ ಅನಾಹುತ ನಡೆಯಲಿಲ್ಲ. ರೈಲು, ಸುರಂಗ ಮಾರ್ಗದ ಸ್ವಲ್ಪ ದೂರದಲ್ಲಿ ನಿಂತಿದ್ದು, ಪ್ರಯಾಣಿಕರು ರೈಲಿನಲ್ಲಿ ಕುಳಿತುಕೊಂಡು ಕಾಯುತ್ತಿದ್ದಾರೆ.

 

ರೈಲ್ವೆ ಇಲಾಖೆ ಮಾನವೀಯತೆಯನ್ನು ತೋರಿಸಿದ್ದು ಪ್ರಯಾಣಿಕರಿಗೆ ಉಚಿತ ಚಹಾ, ತಿಂಡಿ ಒದಗಿಸಿದ್ದಾರೆ. ಕೆಲ ಪ್ರಯಾಣಿಕರು ಬೇರೆ ವಾಹನಗಳಲ್ಲಿ ತೆರಳಿದ್ದಾರೆ.