ಬ್ರೇಕಿಂಗ್ ನ್ಯೂಸ್ : ನಾಪತ್ತೆಯಾದ ದಿಗಂತ್ ಪತ್ತೆ : ಪೊಲೀಸರಿಗೆ ಒಪ್ಪಿಸಿದ ಪೊಲೀಸರು

  • 08 Mar 2025 04:46:01 PM

ಬಂಟ್ವಾಳ, ಮಾರ್ಚ್ 08, 2025 : ಬಹಳ ದಿನಗಳಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಪತ್ತೆಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಫೆಬ್ರವರಿ 25 ರಂದು ದೇವಸ್ಥಾನಕ್ಕೆ ಹೋಗುತ್ತೇನೆಂದು ಹೋದ ದಿಗಂತ್ ಮರಳಿ ಬರದೇ ಇಂದಿಗೆ 12 ದಿವಸಗಳಾಗಿತ್ತು.

 

ಬಂಟ್ವಾಳದ ಡಿಮಾರ್ಟ್ ನಲ್ಲಿದ್ದ ದಿಗಂತ್ ತಾಯಿಗೆ ಕರೆ ಮಾಡಿ ತಿಳಿಸಿದ್ದ ಎಂದು ಹೇಳಲಾಗಿದೆ.  ಉಡುಪಿಯ ಡಿಮಾರ್ಟ್ ಸಿಬ್ಬಂದಿಯ ಫೋನ್ ನಲ್ಲಿ ಕರೆಮಾಡಿ ನಾನು ಉಡುಪಿಯಲ್ಲಿ ಇರುವುದಾಗಿ ತಿಳಿಸಿದ್ದ.  ನನ್ನನ್ನು ಹೊತ್ತುಕೊಂಡು ಹೋಗಿದ್ದಾರೆ, ನಾನು ಓಡಿ ಹೋಗುವವನಲ್ಲ, ಮನೆಗೆ ಬಂದು ಎಲ್ಲವನ್ನೂ ಹೇಳುತ್ತೇನೆ ಎಂದಿದ್ದಾನೆ. 

 

ಇದೀಗ ದಿಗಂತ್ ಸುರಕ್ಷಿತವಾಗಿ ಪತ್ತೆಯಾಗಿದ್ದು ಪೊಲೀಸರು ಮನೆಗೆ ತಂದು ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣದ ನಡೆದ ನಂತರ ಬಹಳಷ್ಟು ರೀತಿಯ ಬೆಳವಣಿಗೆಗಳು ನಡೆದಿದ್ದವು ಆದರೆ ಕೊನೆಯದಾಗಿ ಮಗ ಸುರಕ್ಷಿತವಾಗಿ ಪತ್ತೆಯಾಗಿದ್ದು ಪೋಷಕರಿಗೆ ಖುಷಿಯನ್ನು ತರಿಸಿದೆ.

 

ಬಂಟ್ವಾಳ ಪೊಲೀಸರು ಉಡುಪಿಗೆ ತೆರಳಿ ಆತನನ್ನು ಕರೆ ತಂದು ಪೋಷಕರಿಗೆ ತಂದೊಪ್ಪಿಸಿದ್ದಾರೆ. ನೈಜ ಕಥೆ ಇನ್ನು ಮುಂದಿನ ತನಿಖೆಯ ನಂತರ ತಿಳಿಯಲಿದೆ.