ಬಂಟ್ವಾಳ: ಭಾರತವು ಇಂಧನ ಭದ್ರತೆಯನ್ನು ಹೆಚ್ಚಿಸಲು ಯೋಜನೆಯೊಂದನ್ನು ಸಿದ್ದಪಡಿಸಿದೆ. ಜಾಗತಿಕ ತೈಲ ಪೂರೈಕೆಯನ್ನು ಕಾಪಾಡಲು ಭಾರತವು ಆರು ಸ್ಥಳಗಳಲ್ಲಿ ಹೊಸ ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ.
ಪ್ರಸ್ತುತ ಭಾರತದ ಪೆಟ್ರೋಲಿಯಂ ಮೀಸಲು ಸಾಮರ್ಥ್ಯ 77 ದಿನಗಳ ವರೆಗೆ ಇದ್ದು ಅದನ್ನು ಹೆಚ್ಚಿಸುವ ಮೂಲಕ ತುರ್ತು ಸಂದರ್ಭಗಳಲ್ಲಿ ಸರಿಯಾದ ತೈಲ ಪೂರೈಕೆ ದೊರೆಕಿಸುವ ಮೂಲ ದ್ಯೇಯವಾಗಿದೆ. ಭಾರತದ ಮೀಸಲು ಸಾಮರ್ಥ್ಯವನ್ನು 90 ದಿನಗಳಿಗೆ ಕೊಂಡೊಯ್ಯುವುದು ಯೋಜನೆಯ ಉದ್ದೇಶವಾಗಿದೆ.
ಸರ್ಕಾರವು ಸಾರ್ವಜನಿಕ ವಲಯದ ಎಂಜಿನಿಯರಿಂಗ್ ಸಲಹಾ ಸಂಸ್ಥೆಯಾದ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಇಐಎಲ್) ಗೆ ವಹಿಸಿದೆ. ಕರ್ನಾಟಕದ ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿದೆ ಮತ್ತು ಸುಲಭ ಪ್ರವೇಶ ಮತ್ತು ಸಾರಿಗೆಯನ್ನು ಹೊಂದಿರುವ ಕಾರಣ ಮಂಗಳೂರನ್ನು ಆಯ್ಕೆ ಮಾಡಲಾಗಿದೆ.
ಒಟ್ಟು ಆರು ಪ್ರದೇಶಗಳನ್ನು ಆಯ್ಕೆ ಮಾಡಿರುತ್ತದೆ, ಅದರಲ್ಲಿ ಮಂಗಳೂರು ಕೂಡ ಸೇರ್ಪಡೆಯಾಗಿದೆ. ಹೊಸ ಭೂಗತ ನಿಕ್ಷೇಪಗಳು ಈ ಕೆಳಗಿನವುಗಳಲ್ಲಿ ಬರಲಿವೆ:
• ಚಂಡಿಖೋಲ್ (ಒಡಿಶಾ)
• ಪಾದೂರ್-II & ಮಂಗಳೂರು (ಕರ್ನಾಟಕ)
• ಬಿಕಾನೇರ್ (ರಾಜಸ್ಥಾನ) - ಹೈಡ್ರೋಜನ್/ಅನಿಲ ಸಂಗ್ರಹಣೆಯನ್ನು ಸಹ ಅನ್ವೇಷಿಸಲಾಗುತ್ತಿದೆ
• ರಾಜ್‌ಕೋಟ್ (ಗುಜರಾತ್) ಮತ್ತು ಒಳನಾಡಿನ ಆಯ್ಕೆಗಳನ್ನು ಅಧ್ಯಯನದಲ್ಲಿಡಲಾಗಿದೆ.
ಜಾಗತಿಕ ತೈಲ ಪೂರೈಕೆ ಅಪಾಯಗಳು ಹೆಚ್ಚುತ್ತಿರುವ ನಡುವೆ ಮೋದಿ ನೇತೃತ್ವದ ಕೇಂದ್ರ ಸರಕಾರದ ಕಾರ್ಯತಂತ್ರದ ನಡೆಯಾಗಿದೆ. ಈ ಒಟ್ಟು ಯೋಜನೆಯ ವಿಸ್ತರಣೆಗಾಗಿ ಬಜೆಟ್ FY26 ರಲ್ಲಿ ₹5,597 ಕೋಟಿ ಹಂಚಿಕೆ ಮಾಡಲಾಗಿದೆ.