ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರಿಶೀಲನೆ ನಡೆಸಿದ NITK ತಂಡ, ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿಗಳ ಆದೇಶದ ಮೇರೆಗೆ, ಪಾಣೆಮಂಗಳೂರು ಹಳೆ ಸೇತುವೆಯ ಪ್ರಾಥಮಿಕ ಅಧ್ಯಯನ ನಡೆಸಲಾಯಿತು.
ಸಾರ್ವಜನಿಕ ಸುರಕ್ಷತೆಯನ್ನು ಗಮದಲ್ಲಿಟ್ಟುಕೊಂಡು, ಅಗತ್ಯ ದುರಸ್ತಿ ಕಾರ್ಯ ಮತ್ತು ಸೇತುವೆಯನ್ನು ಮತ್ತಷ್ಟು ಗಟ್ಟಿ ಗೊಳಿಸುವ ಎಲ್ಲಾ ಕ್ರಮಗಳನ್ನು ಮಾಡಬೇಕು ಎಂದು ವರದಿ ನಂತರ ತಿಳಿಸಲಾಗಿದೆ.
ಸೇತುವೆಯ ಎರಡು ದಿಕ್ಕುಗಳ ಪ್ರವೇಶದ ಆರಂಭಿಕ ಪ್ರದೇಶಗಳಲ್ಲಿ ದುರಸ್ತಿ ಕಾರ್ಯವನ್ನು ಆದಷ್ಟು ಬೇಗ ನಡೆಸಲು ತಿಳಿಸಲಾಗಿದೆ. ನುರಿತ ಪ್ರೊಫೆಸರ್ ಗಳು ಸೇತುವೆಯ ಸಮೀಕ್ಷೆ ನಡೆಸಿದ್ದು, ವಿವರವನ್ನು ಪುರಸಭೆ ಮುಖಾಧಿಕಾರಿಗಳಿಗೆ ಒಪ್ಪಿಸಲಾಗಿದೆ ಮತ್ತು ಹೆಚ್ಚಿನ ಅಧ್ಯಯನ ನಡೆಸುವ ಬಗ್ಗೆ ಯೋಜನೆ ಹಾಕಲಾಗಿದೆ.