ಬಂಟ್ವಾಳ: ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸೇತುವೆ ಈಗ ಬಹುಭಾಗವಾಗಿ ಹದಗೆಟ್ಟಿದ್ದು, ತೀವ್ರ ಆತಂಕಕ್ಕೆ ಕಾರಣವಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬಂಟ್ವಾಳ ಕಾರ್ಪೊರೇಷನ್ ತಂಡ, ಪೂರ್ಣ ಪರಿಶೀಲನೆಯ ನಂತರವೇ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ಹೇಳಿದ್ದರು. ಅದರಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ "ಸೂಕ್ಷ್ಮ ತಪಾಸಣೆ ಬಳಿಕ ಸಣ್ಣ ವಾಹನ ಸಂಚಾರಕ್ಕೆ" ಅನುಮತಿ ನೀಡಿದ್ದಾರೆ.
ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗಳನ್ನು ನೋಡಿದರೆ, ಬಂಟ್ವಾಳ ಮತ್ತು ಬಿ ಸಿ ರೋಡ್ ಸಮೀಪದಲ್ಲಿರುವ ಸೇತುವೆ ದುರಸ್ಥಿಯ ಸ್ಥಿತಿ ಅತ್ಯಂತ ಭೀಕರವಾಗಿದೆ. ಸೇತುವೆಯ ಕಂಬಗಳು ತುಕ್ಕು ಹಿಡಿದು ಹಳದಿಯಾಗಿದ್ದು, ಕಂಬಿಗಳು ಮುರಿದು ಹೋಗುವ ಸ್ಥಿತಿಗೆ ಬಂದಿವೆ. ಸರಿಯಾಗಿ ಗಮನಿಸಿದರೆ ಇದೊಂದು "ಕೇವಲ ಸಮಯದ ಪ್ರಶ್ನೆ" ಎಂಬಂತೆ ಕಾಣುತ್ತಿದೆ.
ಇನ್ನಾದರೂ ತಕ್ಷಣ ತೆಗೆದುಕೊಳ್ಳದೆ ಇದ್ದರೆ, ಯಾವುದೇ ಕ್ಷಣದಲ್ಲಿ ಹೆಚ್ಚು ಹಾನಿಯ ದುರಂತ ಸಂಭವಿಸಬಹುದು ಎಂದು ಜನರು ಆತಂಕ ವ್ಯಕಪಡಿಸಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುವ ಆಟೋಗಳು ಸಹ ಈ ಸೇತುವೆಯ ಮೇಲೆಯೇ ಓಡುತ್ತಿವೆ ಎಂಬುದೇ ಇನ್ನಷ್ಟು ತೀವ್ರ ಆತಂಕ ಹುಟ್ಟಿಸುತ್ತಿದೆ. ಮೆಲ್ಕಾರ್ ಪಟ್ಟಣ, ಬಿ ಸಿ ರೋಡ್ ರೈಲ್ವೆ ಸ್ಟೇಷನ್ ಹತ್ತಿರ ಇರುವ ಈ ಸೇತುವೆಯ ಮೇಲೆ ಹತ್ತಿರದ ಜನ ಸಂಚಾರ ನಡೆಸುತ್ತಲೇ ಇರುತ್ತಾರೆ.
ಸಾರ್ವಜನಿಕರು ಕಣ್ಣು ತೆರೆದುಕೊಳ್ಳಬೇಕು!
ಪಾಣೆಮಂಗಳೂರು ಹಳೆ ಸೇತುವೆ ಯಾವುದೇ ಕ್ಷಣದಲ್ಲಿ ಕುಸಿಯಬಹುದು. ಜನರ ಸುರಕ್ಷತೆಗಾಗಿ ತಕ್ಷಣದ ದುರಸ್ತಿ ಕಾಮಗಾರಿ ಆರಂಭಿಸಬೇಕಾಗಿದೆ. ಪ್ರಾಧಿಕಾರಗಳು ಬೇರೊಂದು ದುರಂತವಾಗುವ ಮುನ್ನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.
ಇದನ್ನೂ ಓದಿ: ಬಂಟ್ವಾಳ: ಪಾಣೆಮಂಗಳೂರು ಸೇತುವೆಯಲ್ಲಿ ಲಘು ವಾಹನ ಸಂಚಾರಕ್ಕೆ ಅನುಮತಿ