ಶ್ರೀ ಕ್ಷೇತ್ರ ಪಣೋಲಿಬೈಲು: ಮಾರ್ಚ್ 18 ಮತ್ತು 25 ರಂದು ಅಗೆಲು ಮತ್ತು ಕೋಲ ಸೇವೆಗೆ ಬ್ರೇಕ್.

  • 17 Mar 2025 12:20:41 AM

ಪಣೋಲಿಬೈಲು : ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಶ್ರೀ ಕ್ಷೇತ್ರ ಪಣೋಲಿಬೈಲುವಿನಲ್ಲಿ ಪ್ರತಿವರ್ಷ ನೆರವೇರುವ ಕಲ್ಲುರ್ಟಿ ದೈವದ ಆಗೇಲು ಸೇವೆ ಈ ವರ್ಷ ಮಾರ್ಚ್ 18  ಮತ್ತು ಮಾರ್ಚ್ 25, 2025 ರಂದು ಇರುವುದಿಲ್ಲ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.

 

ಇದರ ಜೊತೆಗೆ, ಕಲ್ಲುರ್ಟಿ ಹಾಗೂ ಕಲ್ಕುಡ ದೈವಗಳ ಕೋಲ ಸೇವೆಯೂ ಇದೇ ದಿನಗಳಲ್ಲಿ ನಡೆಸಲಾಗುವುದಿಲ್ಲ.  ಸ್ಥಳೀಯ ಸಜೀಪಮಾಗಣೆ ನಾಲ್ಕೈತ್ತಾಯ ದೈವದ ಮೆಚ್ಚಿ ಜಾತ್ರೆ ಇರುವುದರಿಂದ ಮೇಲೆ ನಮೂದಿಸಿದ ದಿನಾಂಕದಂದು ಪಣೋಲಿಬೈಲಿನ ಅಗೆಲು ಮತ್ತು ಕೋಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

 

ಪ್ರತಿಯೊಬ್ಬ ಭಕ್ತರೂ ಈ ದಿನಗಳಲ್ಲಿ ಆಗೇಲು ಸೇವೆ ಮತ್ತು ಕೋಲ ಸೇವೆ ನಿರ್ವಹಣೆಯಾಗದಿರುವುದನ್ನು ಗಮನಿಸಿ ತಮ್ಮ ಭಕ್ತಿಪೂರ್ವಕ ಕಾರ್ಯಕ್ರಮಗಳನ್ನು ಯೋಜಿಸಿಕೊಳ್ಳಬೇಕು. ಜಾತ್ರೆಯ ಬಳಿಕ ಮುಂದಿನ ದಿನಗಳಲ್ಲಿ ಆಗೇಲು ಮತ್ತು ಕೋಲ ಸೇವೆಯ ಪ್ರಾರಂಭದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ದೇವಳದ ಆಡಳಿತ ಮಂಡಳಿ ಪ್ರತ್ಯೇಕವಾಗಿ ಪ್ರಕಟಿಸಲಿದೆ.

 

ಭಕ್ತಾದಿಗಳು ಈ ವಿಷಯವನ್ನು ಮನನ ಮಾಡಿ, ದೇವಸ್ಥಾನದ ನಿರ್ಧಾರವನ್ನು ಗೌರವಿಸುವಂತೆ ಸಮಿತಿಯು ಕೋರಿದೆ.