20 June 2025 | Join group

ಪೆರಿಯಶಾಂತಿಯಿಂದ - ಬಿಸಿರೋಡಿನವರೆಗಿನ 2 ಪಥದ ರಸ್ತೆ ಚತುಷ್ಪಥ ರಸ್ತೆಯಾಗಿ ಮಾರ್ಪಾಡು ಆಗುವುದರಿಂದ ಜನರಿಗೇನು ಪ್ರಯೋಜನ.

  • 17 Mar 2025 07:31:57 PM

ಪೆರಿಯಶಾಂತಿಯಿಂದ ಬಿಸಿರೋಡಿನವರೆ ಇದ್ದ 2 ಪಥದ ರಸ್ತೆ ಚತುಷ್ಪಥ ರಸ್ತೆಯಾಗಿ ಮಾರ್ಪಾಡು ಆಗುತ್ತಿರುವುದು ಪ್ರಯಾಣಿಕರರಿಗೆ ಬಹಳ ಸಂತಸ ತರುವ ಸಂಗತಿ. ಮೊದಲಿದ್ದ 2 ಪಥದ ರಸ್ತೆ ಚತುಷ್ಪಥಕ್ಕೆ ಅಗಲೀಕರಣ ಮಾಡುವ ಸಲುವಾಗಿ ಬಹಳಷ್ಟು ಅಕ್ಕ ಪಕ್ಕದ ಜಾಗ ಕಳೆದುಕೊಂಡಿರುವವರು ಅಲ್ಪಸ್ವಲ್ಪ ತೊಂದರೆ ಅನುಭವಿಸಿದ್ದರು, ಸರಕಾರ ಮೌಲ್ಯದ ಪ್ರಕಾರ ಹಣ ಪಾವತಿಸಿ ಸ್ವಾದೀನಪಡಿಸಿಕೊಂಡಿದೆ. ನಾಲ್ಕು ಪಥದ ರಸ್ತೆ ಬರುವುದರಿಂದ ಪ್ರಯಾಣಿಕರಿಗೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಉತ್ತಮವಾದ ಪ್ರಯೋಜನವಿದೆ.

 

ಹಾಗಾದರೆ, ಬನ್ನಿ ನೋಡೋಣ ಪೆರಿಯಶಾಂತಿಯಿಂದ ಬಿಸಿರೋಡ್ ವರೆಗೆ ಚತುಷ್ಪಥ ರಸ್ತೆ ನವೀಕರಣವಾದ ಮೇಲೆ ಪ್ರಯಾಣಿಕರಿಗೆ ಆಗಬಹುದಾದ ಪ್ರಯೋಜನದ ಬಗ್ಗೆ ತಿಳಿಯೋಣ,

 

ಕಡಿಮೆಯಾಗಲಿರುವ ದಟ್ಟಣೆ:

ನಾಲ್ಕು ಪಥದ ರಸ್ತೆಗಳು ಏಕಕಾಲದಲ್ಲಿ ಹೆಚ್ಚಿನ ವಾಹನಗಳಿಗೆ ಅವಕಾಶ ಕಲ್ಪಿಸುತ್ತದೆ, ಇದರಿಂದ ದಟ್ಟಣೆ ಕಡಿಮೆಯಾಗಲಿದೆ. ಸಿಟಿ ಪ್ರದೇಶಗಳಲ್ಲಿ ಫ್ಲೈ ಓವರ್ ಅಥವಾ ಅಂಡರ್ ಗ್ರೌಂಡ್ ರಸ್ತೆ ಮಾಡಿರುವುದರಿಂದ, ಯಾವುದೇ ರೀತಿಯ ಟ್ರಾಫಿಕ್ ಅಡಚಣೆಯಾಗುವ ಸಾಧ್ಯತೆ ಕಡಿಮೆ ಮತ್ತು ಸುಲಭವಾಗಿ ಸಿಟಿ ಪ್ರದೇಶಗಳನ್ನು ದಾಟಬಹುದು.

 

ಸುರಕ್ಷಿತ ಸಂಚಾರ:

ಹೋಗುವ ಮತ್ತು ಬರುವ ಎರಡು ಕಡೆಯ ವಾಹನಗಳಿಗೆ ಪ್ರತ್ಯೇಕ ಲೇನ್ ಗಳು ಇರುವುದರಿಂದ ಯಾವುದೇ ರೀತಿಯ ಮುಖಾಮುಖಿ ಡಿಕ್ಕಿಯ ಅಪಾಯ ಇರೋದಿಲ್ಲ. ಇದು ಅಂಜಿಕೆಯಿಲ್ಲದ ವಾಹನ ಚಾಲನೆಗೆ ಅನುವು ಮಾಡಿಕೊಡುತ್ತದೆ.

 

ವೇಗದ ಮಿತಿ ಹೆಚ್ಚಾಗಲಿದೆ :

ನಾಲ್ಕು ಪಥದ ರಸ್ತೆಗಳು ವಾಹನ ಚಾಲಕರಿಗೆ ತಮ್ಮ ನಿರ್ದಿಷ್ಟ ವೇಗವನ್ನು ಕಾಪಾಡಲು ಸಹಕಾರಿಯಾಗುತ್ತದೆ. ಇದು ಎರಡು ಪಥದ ರಸ್ತೆಗಳಿಗೆ ಹೋಲಿಸಿದರೆ ಕಡಿಮೆ ಪ್ರಯಾಣದ ಸಮಯಕ್ಕೆ ಕೊಡುಗೆ ನೀಡುತ್ತದೆ.

 

ಉತ್ತಮ ಸಂಚಾರ ನಿರ್ವಹಣೆ :

ಹೆಚ್ಚುವರಿ ಲೇನ್ ಗಳು ಸಂಚಾರವನ್ನು ನಿರ್ವಹಿಸುವಲ್ಲಿ ಹೆಚ್ಚಿನ ನಮ್ಯತೆಯನ್ನು ಒದಗಿಸುತ್ತದೆ. ವಾಹನಗಳಿಗೆ ತಿರುವು, ರಸ್ತೆಗಳ ವಿಲೀನ ಅಥವಾ ದೊಡ್ಡ ವಾಹನಗಳಿಗೆ ಗೊತ್ತುಪಡಿಸಿದ ಲೇನ್ ಗಳು ಈ ಎಲ್ಲಾ ಅನುಕೂಲತೆಯಿಂದ ಸಂಚಾರ ಸುಗಮವಾಗಲಿದೆ.

 

ಆರ್ಥಿಕ ಪ್ರಯೋಜನಗಳು :

ಸುಧಾರಿತ ರಸ್ತೆ ಮೂಲಸೌಕರ್ಯವು ಸರಕು ಮತ್ತು ಸೇವೆಗಳ ಉತ್ತಮ ಸಾಗಣೆಗೆ ಅನುಕೂಲವಾಗುವ , ವ್ಯವಹಾರಗಳನ್ನು ಆಕರ್ಷಿಸುವ ಮೂಲಕ ಮತ್ತು ಮಾರ್ಗದಲ್ಲಿ ಆಸ್ತಿ ಮೌಲ್ಯಗಳನ್ನು ಹೆಚ್ಚಿಸುವ ಮೂಲಕ, ವರ್ಧಿತ ಆರ್ಥಿಕ ಚಟುವಟಿಕೆಗಳಿಗೆ ಕಾರಣವಾಗಬಹುದು.

 

ಪರಿಸರದ ಮೇಲೆ ಕಡಿಮೆ ಪರಿಣಾಮ :

ಯಾವುದೇ ಅಡಚಣೆಗಳಿಲ್ಲದೆ ಉತ್ತಮ ಸಂಚಾರ, ವಾಹನಗಳ ಉತ್ತಮ ಹರಿವು ಇರುವುದರಿಂದ ವಾಹನದ ಚಾಲನೆ ನಯವಾಗುತ್ತದೆ ಮತ್ತು ಇದು ಕಡಿಮೆ ಹೊಗೆ ಹೊರಸೂಸುವಿಕೆಗೆ ಕಾರಣವಾಗುತ್ತದೆ, ಇದು ಸ್ವಚ್ಛ ಪರಿಸರಕ್ಕೆ ಕೊಡುಗೆ ನೀಡುತ್ತದೆ.

 

ವ್ಯಾಪಾರ ಸೃಷ್ಟಿ :

ಚತುಷ್ಪತ ರಸ್ತೆಯ ನಂತರ ದೂರದ ಊರುಗಳಿಂದ ಬರುವ ವಾಹನಗಳ ಸಂಖ್ಯೆ ಜಾಸ್ತಿಯಾಗಲಿದೆ. ವಾಹನದ ಸಂಖ್ಯೆ ಜಾಸ್ತಿಯಾದಂತೆ ಪ್ರಯಾಣಿಕರ ಬೇಡಿಕೆ ಕೂಡ ಜಾಸ್ತಿಯಾಗುತ್ತವೆ. ಆದ್ದರಿಂದ ರಸ್ತೆಯ ಎರಡು ಭಾಗಗಳಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ಹೋಟೆಲ್ ಗಳು, ಜ್ಯೂಸು ಸೆಂಟರ್ ಗಳು ಅಥವಾ ಇನ್ನಿತರ ಹಲವಾರು ಹೊಸ ವಹಿವಾಟುಗಳು ಬರಲಿದೆ. ಇದು ಜನರಿಗೆ ಉದ್ಯೋಗ ಕಲ್ಪಿಸಲಿದೆ.