20 June 2025 | Join group

ವಿಟ್ಲದಲ್ಲಿ ಬಟ್ಟೆ ಅಂಗಡಿಗೆ ನುಗ್ಗಿ ಬಟ್ಟೆ ಮತ್ತು ಇನ್ನಿತರ ವಸ್ತುಗಳನ್ನು ದೋಚಿದ ಗ್ಯಾಂಗ್..!

  • 19 Mar 2025 07:34:14 PM

ಕೇವಲ ವಿವರಣೆಗಾಗಿ ಮಾತ್ರ ಈ ಚಿತ್ರ ಬಳಸಲಾಗಿದೆ

ವಿಟ್ಲ : ವಿಟ್ಲ ಶಾಲೆ ರಸ್ತೆಯ ಬಳಿ ಇರುವ ಬಟ್ಟೆ ಅಂಗಡಿಯೊಂದಕ್ಕೆ ನಾಲ್ವರು ವ್ಯಕ್ತಿಗಳು ನುಗ್ಗಿದ ಘಟನೆ ನಡೆದಿದೆ. ಬಟ್ಟೆ ಅಂಗಡಿಯಲ್ಲಿ ಒಂಟಿ ಮಹಿಳೆ ಕೆಲಸ ಮಾಡುತ್ತಿದ್ದು, ಅವರನ್ನು ಬೆದರಿಸಿ ಬಟ್ಟೆ ಮತ್ತು ಇತರ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

 

ಮಾರ್ಚ್ 18 ರಂದು ಈ ಘಟನೆ ನಡೆದಿದ್ದು, ನವೀನ ಕುಂಪಲ ನೇತೃತ್ವದ ತಂಡ ಈ ಕೃತ್ಯ ಎಸಗಿದೆ ಎಂದು ವರದಿಯಾಗಿದೆ. ಈ ತಂಡ ಅಂಗಡಿಗೆ ಏಕಾಏಕಿ ನುಗ್ಗಿ ಅಲ್ಲಿದ್ದ ಬಟ್ಟೆಬರೆ ಮತ್ತು ಇನ್ನಿತರ ವಸ್ತುಗಳನ್ನು ಅವರ ಚೀಲಗಳಲ್ಲಿ ತುಂಬಿಸಿ ಪರಾರಿಯಾಗಿದ್ದಾರೆ. 

 

ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಪ್ರಶ್ನೆ ಮಾಡಿದಾಗ ನಿಮ್ಮ ವ್ಯವಹಾರ ನೋಡಿಕೊಳ್ಳಿ, ನಮ್ಮ ತಂಟೆಗೆ ಬರಬೇಡಿ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

 

ಆರೋಪಿಗಳು ತಂದಿರುವ ಚೀಲಗಳಲ್ಲಿ ಬಟ್ಟೆ ಮತ್ತು ಇನ್ನಿತರ ವಸ್ತುಗಳನ್ನು ತುಂಬಿಸಿಕೊಂಡು ತಾವು ಬಂದಿದ್ದ ಕಾರಿನಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.