IPL 2025 : ಕಳೆದ 17 ವರ್ಷಗಳಿಂದ ಆರ್‌ಸಿಬಿ ತಂಡ ತನ್ನ ಉತ್ತಮ ಪ್ರದರ್ಶನ ನೀಡಿದರು, ಐಪಿಎಲ್ ಕಪ್ ಎತ್ತಲು ಸಾಧ್ಯವಾಗಲಿಲ್ಲ. ಈ ವರ್ಷ ಕಪ್ ನಮ್ದೇ ಅನ್ನುವ ಆರ್‌ಸಿಬಿ ಫ್ಯಾನ್ಸ್ ತುಂಬಾ ಕುತೂಹಲದಿಂದ 18ನೇ ವರ್ಷದ ಐಪಿಎಲ್ ಕಪ್ ಆರ್‌ಸಿಬಿ ತಂಡಕ್ಕೆ ಸಿಗಲಿದೆ ಎನ್ನುವ ಪೂರ್ಣಪ್ರಮಾಣದ ಭರವಸೆಯಲ್ಲಿದ್ದಾರೆ.
ರಜತ್ ಪಾಟೀದಾರ್ ತಂಡಕ್ಕೆ ಹೊಸ ನಾಯಕನಾದರೂ, ವಿರಾಟ್ ಕೊಹ್ಲಿ ಹೆಗಲ ಮೇಲೆ ಆರ್‌ಸಿಬಿ ತಂಡವನ್ನು ಮುನ್ನಡೆಸುವ ಬಹು ದೊಡ್ಡ ಜವಾಬ್ದಾರಿಯಿದೆ. ಕಳೆದ ವರ್ಷ ಕೊನೆಯ ಹಂತಗಳಲ್ಲಿ ಉತ್ತಮ ಪ್ರದರ್ಶ ನೀಡದ ತಂಡ ಫೈನಲ್ ಪ್ರವೇಶದ ಅವಕಾಶವನ್ನು ಕಳೆದುಕೊಂಡಿತ್ತು. ಇದರಿಂದಾಗಿ ಆರ್‌ಸಿಬಿ ಫ್ಯಾನ್ಸ್ ತುಂಬಾ ನಿರಾಶರಾಗಿದ್ದರು.
ಕಳೆದ ವರ್ಷ ಆರ್‌ಸಿಬಿ ಹೇಗೆ ಪ್ರದರ್ಶನ ನೀಡಿತ್ತು? ಹೇಗೆ ಹೊರಬಿತ್ತು ?
ಆಡಿದ ಮೊದಲ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋತ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಗಮನಾರ್ಹ ತಿರುವು ಪಡೆದುಕೊಂಡಿತು ಮತ್ತು ನಿವ್ವಳ ರನ್-ರೇಟ್‌ನಲ್ಲಿ
ಚೆನ್ನೈ ಸೂಪರ್ ಕಿಂಗ್ಸ್ (CSK) ಅನ್ನು ಸೋಲಿಸುವ ಮೂಲಕ ಪ್ಲೇಆಫ್ ಸ್ಥಾನವನ್ನು ಪಡೆದುಕೊಂಡಿತು. ಆದಾಗ್ಯೂ, RCB ಯ ಕನಸಿನ ಓಟವನ್ನು ಎಲಿಮಿನೇಟರ್‌ನಲ್ಲಿ ರಾಜಸ್ಥಾನ ರಾಯಲ್ಸ್ (RR) ತಡೆಹಿಡಿಯಿತು. ಹೇಗೆ RCB ಫೈನಲ್ ನಿಂದ ಹೊರನಡೆಯಿತು.
ಈ ವರ್ಷ ಏನದು ಜಾದು ?
ಹೌದು, 18 ನೇ ವರ್ಷದ ಐಪಿಎಲ್ ಪಂದ್ಯ ಬಹಳ ರೋಚಕವಾಗಿರುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಆರ್‌ಸಿಬಿ ತಂಡದ ಮಾಂತ್ರಿಕ ಕಿಂಗ್ ಕೊಹ್ಲಿಯ ಜೆರ್ಸಿ ಕೂಡ 18 ನಂಬರ್ ಒಂದಿದೆ. ಆದ್ದರಿಂದ ಈ ವರ್ಷ ವಿರಾಟ್ ಕೊಹ್ಲಿ ಮತ್ತು ತಂಡಕ್ಕೆ ದೊಡ್ಡ ಅದೃಷ್ಟದ ವರ್ಷ ಎನ್ನುತ್ತಾರೆ ಆರ್‌ಸಿಬಿ ಅಭಿಮಾನಿಗಳು.
ರಜತ್ ಪಾಟೀದಾರ್ ನೇತೃತ್ವದ ತಂಡ ಇದೆ ಮಾರ್ಚ್ 22, 2025 ರಂದು ತನ್ನ ಮೊದಲ ಪಂದ್ಯ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಆಡಲಿದೆ. ಈ ಪಂದ್ಯ ಭಾರತದ ಸಮಯ ಸಂಜೆ 6.00ಕ್ಕೆ ಈಡನ್ ಗಾರ್ಡನ್ ನಲ್ಲಿ ನಡೆಯಲಿದ್ದು ಐಪಿಎಲ್ ವೆಬ್ ಸೈಟ್ ಪ್ರಕಾರ ಉಭಯ ತಂಡಗಳಿಗೆ 50-50 ವಿನ್ನಿಂಗ್ ಗೆಲ್ಲುವ ಸಂಭವನೀಯತೆ ಎಂದು ನಮೂದಿಸಲಾಗಿದೆ.