ಕಾಸರಗೋಡು ಜಿಲ್ಲೆಯ ಬಡಿಯಡ್ಕದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಒಬ್ಬ ವ್ಯಕ್ತಿ ಓಮ್ಲೆಟ್ ತಿನ್ನುವಾಗ ಅದರ ತುಂಡು ಕಂಠದಲ್ಲಿ ಸಿಲುಕಿಕೊಂಡು ಉಸಿರಾಟದ ನಾಳಿಯನ್ನು (ಟ್ರೇಕಿಯಾ) ಸಂಪೂರ್ಣ ತಡೆದ ಪರಿಣಾಮ ಉಸಿರಾಡಲಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಬದಿಯಡ್ಕದ ಚುಳ್ಳಿಕ್ಕಾನಸದ, ಬಾರಡ್ಕ ನಿವಾಸಿ ವಿನ್ಸೆಂಟ್ ಕ್ರಾಸ್ತಾ (52) ಎಂದು ಗುರುತಿಸಲಾಗಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಅವರು ಪ್ರಾಣ ಕಳೆದುಕೊಂಡರು ಎಂದು ವರದಿಯಾಗಿದೆ.
ಚೋಕಿಂಗ್ ಅಪಾಯ ಹೇಗೆ?
ದೊಡ್ಡ ಆಹಾರದ ತುಂಡು ಕಂಠದಲ್ಲಿ ಅಂಟಿಕೊಂಡಾಗ ಕೆಲವೇ ನಿಮಿಷಗಳಲ್ಲಿ ಮೆದುಳಿಗೆ ಆಮ್ಲಜನಕ ತಲುಪದೆ ಜೀವಕ್ಕೆ ಅಪಾಯವಾಗಬಹುದು.
ತಪ್ಪದೇ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು
* ಆಹಾರವನ್ನು ಸದಾ ಚೆನ್ನಾಗಿ ಜಗಿದು ಮಾತ್ರ ನುಂಗಬೇಕು.
* ತಿನ್ನುವಾಗ ತಡಕಾಡಬಾರದು, ಮಾತನಾಡಬಾರದು, ನಗಬಾರದು.
* ದೊಡ್ಡ ತುಂಡುಗಳನ್ನು ತಿನ್ನುವುದನ್ನು ತಪ್ಪಿಸಿಕೊಳ್ಳಬೇಕು.
* ತುರ್ತು ಸಂದರ್ಭಗಳಲ್ಲಿ ಹೈಮ್ಲಿಚ್ ಮ್ಯಾನೋವರ್ ಅಥವಾ ಬ್ಯಾಕ್ ಬ್ಲೋಸ್ ತಿಳಿದಿದ್ದರೆ ಜೀವ ಉಳಿಸಬಹುದು.
* ಹಿರಿಯರು ಹಾಗೂ ಮಕ್ಕಳಿಗೆ ಆಹಾರವನ್ನು ಚಿಕ್ಕಚಿಕ್ಕ ತುಂಡುಗಳಲ್ಲಿ ನೀಡುವುದು ಸುರಕ್ಷಿತ.
* ತಿನ್ನುವಾಗ ಮೊಬೈಲ್/ಟಿವಿ ಮುಂತಾದ ಗಮನ ಬೇರೆಡೆ ಸೆಳೆಯುವ ವಿಷಯಗಳಿಂದ ದೂರವಿರಬೇಕು.
ಇದನ್ನು ಓದಿ: ಹೈಮ್ಲಿಚ್ ಮ್ಯಾನೋವರ್: ಚೋಕಿಂಗ್ (ಉಸಿರಾಟ ನಿಲ್ಲುವ) ಸಂದರ್ಭ ಜೀವ ಉಳಿಸುವ ತುರ್ತು ತಂತ್ರ





