20 June 2025 | Join group

ಸಿಎಂ, ಸಚಿವರ, ಶಾಸಕರ ವೇತನ ಸದ್ದಿಲ್ಲದೇ ಶೇ.100% ಹೆಚ್ಚಳ. ಯಾರಿಗೆ ಎಷ್ಟೆಷ್ಟು - ಇಲ್ಲಿದೆ ವರದಿ

  • 22 Mar 2025 11:34:38 AM

ಬೆಂಗಳೂರು : ಮುಖ್ಯಮಂತ್ರಿ, ಸಚಿವರ, ಶಾಸಕರ ವೇತನದಲ್ಲಿ ಯಾವುದೇ ಚರ್ಚೆ, ಗೊಂದಲವಿಲ್ಲದೆ "ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ತಿದ್ದುಪಡಿ ಮಸೂದೆ 2025 ಮತ್ತು "ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ಪಿಂಚಣಿಗಳು ಮತ್ತು ಭತ್ಯೆಗಳ ತಿದ್ದುಪಡಿ ಮಸೂದೆ 2025" ಮುಖಾಂತರ ಮಂಜೂರಾಗಿದೆ.

 

ಜೀವನ ವೆಚ್ಚದಲ್ಲಿ ಗಣನೀಯ ಏರಿಕೆಯಾಗಿರುವುದರಿಂದ, ಸಿಎಂ, ಸಚಿವರು, ರಾಜ್ಯ ಸಚಿವರು ಮತ್ತು ಉಪಮಂತ್ರಿಗಳ ವೇತನ ಮತ್ತು ಭತ್ಯೆಗಳನ್ನು ದೀರ್ಘಕಾಲದಿಂದ ಪರಿಷ್ಕರಿಸಲಾಗಿಲ್ಲ, ಸಂಸದೀಯ ಪದಾಧಿಕಾರಿಗಳು ಹಾಗೂ ಶಾಸಕರುಗಳ ವೇತನ ಮತ್ತು ಭತ್ಯೆಯಲ್ಲಿನ ಹೆಚ್ಚಳವನ್ನು ಸಮರ್ಥಿಸಲು " ಜೀವನ ವೆಚ್ಚದಲ್ಲಿ ಗಣನೀಯ ಹೆಚ್ಚಳ " ಆಗಿರುವುದರಿಂದ ಈ ವೇತನ ಹೆಚ್ಚಳ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

 

ಹಾಗಾದರೆ, ಬನ್ನಿ ನೋಡೋಣ ಸದ್ದಿಲ್ಲದೆ ವೇತನ ಮತ್ತು ಭತ್ಯೆ ಹೆಚ್ಚಳ ಮಾಡಿದ ವಿವರ,

ಪ್ರಸ್ತುತ ಮುಖ್ಯಮಂತ್ರಿಗಳ ವೆಚ್ಚನ 75,000 ಇದೆ, ಈ ಮಸೂದೆ ಅಂಗೀಕಾರದಿಂದ ಅವರ ವೇತನ 1.5 ಲಕ್ಷ ಆಗಲಿದೆ. ಮುಖ್ಯಮಂತ್ರಿ ಅಥಿತಿ ಭತ್ಯೆ ಸದ್ಯಕ್ಕೆ 4.5 ಲಕ್ಷ ಇದ್ದು, ಇನ್ನು ಮುಂದೆ 5 ಲಕ್ಷ ಆಗಲಿದೆ.

ಸಚಿವರ ವೇತನ ರೂ.60,000 ದಿಂದ ರೂ.1.25 ಲಕ್ಷ ಆಗಲಿದೆ.

ರಾಜ್ಯ ಸಚಿವರ ಮನೆ ಬಾಡಿಗೆ ರೂ.1.20 ಲಕ್ಷ ಇನ್ನು ರೂ.2.0 ಲಕ್ಷ ಆಗಲಿದೆ.

ವಿಧಾನ ಪರಿಷತ್ ಮತ್ತು ವಿಧಾನ ಸಭೆ ವಿಪಕ್ಷ ನಾಯಕರ ವೇತನ ರೂ.60,000 ಇದ್ದು ರೂ.80,000 ಆಗಲಿದೆ.

ಸಭಾಧ್ಯಕ್ಷ ಮತ್ತು ಸಭಾಪತಿ ವೇತನ ರೂ.75,000 ಇದ್ದು , ಇನ್ನು ಮುಂದೆ ರೂ.1.25 ಲಕ್ಷ ಆಗಲಿದೆ, ಇವರ ಭತ್ಯೆ ರೂ.4.0 ಲಕ್ಷ ಇರೋದು ರೂ.5.0 ಲಕ್ಷ ಆಗಲಿದೆ.

ಉಪ ಸಭಾಧ್ಯಕ್ಷ ಮತ್ತು ಉಪ ಸಭಾಪತಿಗಳ ವೇತನ ರೂ.60,000 ಇದೆ. ಹೊಸ ತಿದ್ದುಪಡಿ ಮೂಲಕ ರೂ.80,000 ಸಾವಿರ ಆಗಲಿದೆ. ಉಪ ಸಭಾಧ್ಯಕ್ಷ ಮತ್ತು ಉಪ ಸಭಾಪತಿಗಳ ಅತಿಥಿ ಭತ್ಯೆ ರೂ.2.50 ಲಕ್ಷ ಇದ್ದು ರೂ.3.00 ಲಕ್ಷ ರೂಪಾಯಿ ಆಗಲಿದೆ.

ಮುಖ್ಯ ಸಚೇತಕರ ವೇತನ ರೂ.50,000 ಇದ್ದು ರೂ.70,000 ಆಗಲಿದೆ. ಮುಖ್ಯ ಸಚೇತರ ಅತಿಥಿ ಭತ್ಯೆ ರೂ.2.50 ಲಕ್ಷದಿಂದ ರೂ.3.0 ಲಕ್ಷ ಆಗಲಿದೆ.

 

ಹನಿಟ್ರಾಪ್ ಪ್ರಕರಣವನ್ನು ಸಿಬಿಐ ಅಥವಾ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಬಿಜೆಪಿ ಸದನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ, ಮುಚ್ಚುಮರೆಯಿಂದ ವೇತನ ಹೆಚ್ಚಳದ ಮಸೂದೆಯನ್ನು ಅಂಗೀಕರಿಸಲಾಗಿದೆ.