ಬಂಟ್ವಾಳ : ಬಂಟ್ವಾಳ ಶಿಕ್ಷಣ ವಿಭಾಗದಲ್ಲಿ ಒಟ್ಟು 5879 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಪಡೆದಿದ್ದು, 5,827ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುತ್ತಾರೆ. ಉಳಿದ 52 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುಹಾಜರಾಗಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಒಟ್ಟು 18 ಪರೀಕ್ಷಾ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವ್ ಅಳವಡಿಸಿದ್ದು, ಉತ್ತಮವಾದ ವ್ಯವಸ್ಥೆಯನ್ನು ಮಾಡಲಾಗಿದೆ. ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಪ್ರತಿ ಕೇಂದ್ರಗಳಲ್ಲೂ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಶ್ರೀರಾಮ ಹೈಸ್ಕೂಲ್ ಕಲ್ಲಡ್ಕ ದಲ್ಲಿ 485 ವಿದ್ಯಾರ್ಥಿಗಳು, ವಾಮದಪದವು 470 ವಿದ್ಯಾರ್ಥಿಗಳು, ಯಸ್ ವಿ ಯಸ್ ಟೆಂಪಲ್ ಶಾಲೆಯಲ್ಲಿ 455, ವಿಟ್ಲ ಪ್ರೌಢ ಶಾಲೆಯಲ್ಲಿ 400 ಪರೀಕ್ಷೆ ಬರೆದರೆ, ಉಳಿದ ವಿದ್ಯಾರ್ಥಿಗಳು ಬೇರೆ ಬೇರೆ ವಿದ್ಯಾ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಿರುತ್ತಾರೆ.
ಮಾರ್ಚ್ 21ರಂದು ಹತ್ತನೇ ತರಗತಿಯ ಮೊದಲ ಪರೀಕ್ಷೆ ನಡೆದಿದೆ. ಬಂಟ್ವಾಳ ತಾಲೂಕಿನಲ್ಲಿ 96 ಮಕ್ಕಳು ಮರು ಪರೀಕ್ಷೆ ಬರಿದೆದ್ದು, ಅದರಲ್ಲಿ 83 ಹುಡುಗರು ಮತ್ತು 13 ಹುಡುಗಿಯರು ಇದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು 40,000 ವಿದ್ಯಾರ್ಥಿಗಳು 10ನೇ ತರಗತಿಯ ಪರೀಕ್ಷೆ ಬರೆದಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 28,728 ವಿದ್ಯಾರ್ಥಿಗಳು ಭಾಗವಹಿಸಿದ್ದು, 229 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆ.