20 June 2025 | Join group

ಮಾರ್ಚ್ 24 ರಿಂದ ಎರಡು ದಿನಗಳ ಮುಷ್ಕರಕ್ಕೆ ಬ್ಯಾಂಕ್ ಒಕ್ಕೂಟಗಳ ಕರೆ: 5 ದಿನಗಳ ಕೆಲಸದ ವಾರಕ್ಕೆ ಒತ್ತಾಯ ಮತ್ತು ಇನ್ನಿತರ ಡಿಮ್ಯಾಂಡ್..

  • 14 Feb 2025 01:43:17 PM

ಸಾರಾಂಶ

ಮಾರ್ಚ್ 24 ರಿಂದ ಎರಡು ದಿನಗಳ ಮುಷ್ಕರಕ್ಕೆ ಬ್ಯಾಂಕ್ ಒಕ್ಕೂಟ ಕರೆ. 5 ದಿನಗಳ ಕೆಲಸದ ವಾರ ಮತ್ತು ಇನ್ನಿತರ ಬೇಡಿಕೆಗಳಿಗೆ ಒತ್ತಾಯ.

---------------

ಮಾರ್ಚ್ 24-25, 2025 ರಂದು ರಾಷ್ಟ್ರವ್ಯಾಪಿ ಮುಷ್ಕರವನ್ನು ನಡೆಸಲು ಬ್ಯಾಂಕ್ ಒಕ್ಕೂಟಗಳು ಘೋಷಿಸಿದೆ. 5 ದಿವಸಗಳ ಕೆಲಸದ ವಾರ ಮತ್ತು ಸಾಕಷ್ಟು ನೇಮಕಾತಿ ಸೇರಿದಂತೆ ಬೇಡಿಕೆಗಳನ್ನು ಈಡೇರಿಸುವಂತೆ ಎರಡು ದಿನದ ಮುಷ್ಕರಕ್ಕೆ ಬ್ಯಾಂಕ್ ಒಕ್ಕೂಟಗಳು ಕರೆ ನೀಡಿದೆ. ಈ ಹಿಂದೆ, AIBOC ಫೆಬ್ರವರಿ 24-25, 2025 ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಬೆದರಿಕೆ ಒಡ್ಡಿತ್ತು.

 

ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕೆಲಸಗಾರರು ಮತ್ತು ಅಧಿಕಾರಿಗಳ ನಿರ್ದೇಶಕ ಹುದ್ದೆಯನ್ನು ಭರ್ತಿ ಮಾಡುವುದು, ಉದ್ಯೋಗ ಭದ್ರತೆಗೆ ಬೆದರಿಕೆ ಹಾಕುವ ಇತ್ತೀಚಿನ ನಿರ್ದೇಶಗಳನ್ನು ಹಿಂಪಡೆಯಬೇಕೆಂದು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಸಹ ಪ್ರತಿಪಾದಿಸಿದೆ.

 

ಕೆಲಸದ ದಿನವನ್ನು ವಾರದಲ್ಲಿ 5 ದಿನಕ್ಕೆ ಸೀಮಿತಗೊಳಿಸಬೇಕು ಮತ್ತು ಎಲ್ಲಾ ಕೇಡರ್ ಗಳಲ್ಲಿ ಸಮರ್ಪಕ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಬ್ಯಾಂಕ್ ಒಕ್ಕೂಟಗಳು ಮಾರ್ಚ್ 24 ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಕರೆ ನೀಡಿದೆ. ಮಾರ್ಚ್ 24 ಮತ್ತು 25 ಎರಡು ದಿವಸ ಈ ಮುಷ್ಕರ ನಡೆಯಲಿದೆ ಎಂದು ಒಕ್ಕೂಟ ತಿಳಿಸಿದೆ.

 

ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಒಟ್ಟು 9 ಬ್ಯಾಂಕ್ ನೌಕರರ ಒಕ್ಕೂಟವಾಗಿದ್ದು, ಮುಷ್ಕರ ಕರೆಯು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕಾರ್ಮಿಕರು ಮತ್ತು ಅಧಿಕಾರಿ ನಿರ್ದೇಶಕರ ಕೊರತೆ ಇದ್ದು ಆ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.

 

ಇದಲ್ಲದೆ, ಉದ್ಯೋಗದ ಭದ್ರತೆಗೆ ಬೆದರಿಕೆ ಹಾಕುವ ಮತ್ತು ಉದ್ಯೋಗಳಲ್ಲಿ ವಿಭಜನೆಯನ್ನು ಸೃಷ್ಟಿಸುವ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಕಾರ್ಯಕ್ಷಮತೆ ಸಂಬಂಧಿತ ಪ್ರೋತ್ಸಾಹಗಳ ಕುರಿತು ಹಣಕಾಸು ಸೇವೆಗಳ ಇಲಾಖೆ (DFS) ಇತ್ತೀಚಿಗೆ ಹೊರಡಿಸಿರುವ ನಿರ್ದೇಶನಗಳನ್ನು ತಕ್ಷಣ ಹಿಂಪಡೆಯುವಂತೆ UFBU ಒತ್ತಾಯಿಸಿದೆ. DFS ನ ನೀತಿ ವಿಷಯಗಳಲ್ಲಿ PSB ಗಳ ಸೂಕ್ಷ್ಮ ನಿರ್ವಹಣೆಯು ಆಯಾ ಮಂಡಳಿಗಳ ಸ್ವಾಯತತ್ತೆಯನ್ನು ದುರ್ಬಲಗೊಳಿಸುತ್ತದೆ ಎಂದು UFBU ಆರೋಪಿಸಿದೆ.

 

ಮಾದ್ಯಮಗಳ ವರದಿ ಪ್ರಕಾರ, ಸರಿಯಾದ ಚರ್ಚೆಗಳನ್ನು ನಡೆಸಿದ ನಂತರ ಮಾರ್ಚ್ 24 ರಿಂದ ಮುಷ್ಕರ ಶುರು ಮಾಡಿ ಮಾರ್ಚ್ 25 ರಂದು ಕೊನೆಗೊಳಿಸಲಗುಹುದು ಮತ್ತು ಈ ಮುಷ್ಕರ ಎರಡು ದಿವಸ ನಿರಂತರವಾಗಿ ನಡೆಯಲಿದೆ ಎಂದು UFBU ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿರುತ್ತದೆ.

 

ಭಾರತೀಯ ಬ್ಯಾಂಕುಗಳ ಸಂಘದೊಂದಿಗೆ ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸರ್ಕಾರಿ ನೌಕರರಿಗೆ ಯೋಜನೆಯಂತೆ ಗರಿಷ್ಠ ಮಿತಿಯನ್ನು 25 ಲಕ್ಷ ರೂಪಾಯಿಗೆ ಹೆಚ್ಚಿಸಲು ಮತ್ತು ಆದಾಯ ತೆರಿಗೆಯಿಂದ ವಿನಾಯಿತಿ ನೀಡಲು ಗ್ರ್ಯಾಚುಟಿ ಕಾಯ್ದಿಗೆ ತಿದ್ದುಪಡಿ ತರುವಂತೆಯೂ ಒತ್ತಾಯಿಸಿದ್ದಾರೆ.

 

UFBU ನ ಪ್ರಮುಖ ಘಟಕಗಳಲ್ಲಿ ಒಂದಾಗಿರುವ UFBU ನಿರ್ಧರಿಸಿದ ದಿನಾಂಕಗಳಿಗೆ ಅನುಗುಣವಾಗಿ ಮುಷ್ಕರ ದಿನಾಂಕಗಳನ್ನು ಬದಲಾಯಿಸಲು ಐಬೋಕ್ ನಿರ್ಧರಿಸಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. UFBU ನ ಸದಸ್ಯರಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (AIBEA), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (AIBOC), ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ (NCBE), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (AIBOA) ಮತ್ತು ಬ್ಯಾಂಕ್ ನೌಕರರ ಒಕ್ಕೂಟ (BEFI) ಸೇರಿವೆ.