ಕೆಲ ವರ್ಷಗಳ ಹಿಂದೆ ಅಂಗಡಿಗಳಲ್ಲಿ ಗೋಲಿ ಸೋಡಾ ಸಡ್ಡು ಮಾಡಿತ್ತು. ಕ್ರಮೇಣ ಅಂತಾರಾಷ್ಟ್ರೀಯ ಪಾನೀಯಗಳು ದೇಶದ ಎಲ್ಲಾ ಅಂಗಡಿಗಳನ್ನು ಆವರಿಸಿಕೊಂಡು ಗೋಲಿ ಸೋಡಾದ ಸಡ್ಡು ಕಡಿಮೆಯಾಗುತ್ತಾ ಬಂತು. ಗೋಲಿ ಸೋಡಾ ಓಪನ್ ಮಾಡುವ ಸಮಯದಲ್ಲಿ ಅದರಿಂದ ಬರುವ ಶಬ್ದ ಕೇಳವುದೆಂದರೆ ಖುಷಿ.
ಆದರೆ, ಈಗ ಗೋಲಿ ಸೋಡಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಬ್ಬರಿಸಲು ಶುರು ಮಾಡಿದೆ. ಭಾರತದ ಈ ಸಂಪ್ರದಾಯಿಕ ಪಾನೀಯಕ್ಕೆ ವಿದೇಶದಲ್ಲಿ ಬಹಳ ಬೇಡಿಕೆ ಇದೆ. ಗೋಲಿ ಸೋಡಾವನ್ನು ವಿದೇಶಿ ಮಾರುಕಟ್ಟೆಯಲ್ಲಿ "ಗೋಲಿ ಪಾಪ್ ಸೋಡಾ" ಎಂಬ ಹೆಸರಿನಲ್ಲಿ ಮಾರಾಟದ ಮಾಡಲಾಗುತ್ತದೆ.
ಅಮೇರಿಕ, ಯೂರೋಪ್, ಬ್ರಿಟನ್ ಮತ್ತು ಗಲ್ಫ್ ದೇಶಗಳಲ್ಲಿ ಈ ಗೋಲಿ ಸೋಡಾ ಸಡ್ಡು ಮಾಡುತ್ತಿದೆಯಂತೆ. ಕೇಂದ್ರ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಪ್ರಾಧಿಕಾರ ವಿದೇಶಗಳೊಂದಿಗಿನ ಭಾರತದ ಈ ಪಾಲುದಾರಿಕೆಗೆ ಸಂತಸ ವ್ಯಕ್ತ ಪಡಿಸಿದೆ.
ವಿದೇಶದ ಹಲವಾರು ಕಡೆ ಪ್ರಾಯೋಗಿಕ ಮಾರಾಟ ಯಶಸ್ವಿಯಾಗಿದ್ದು, ಅದರ ರುಚಿ ಮತ್ತು ಪ್ಯಾಕಿಂಗ್ ಶೈಲಿಗೆ ವಿದೇಶಿಗರು ಮಾರು ಹೋಗುತ್ತಿದ್ದಾರೆ. ಕೇರಳ ಮೂಲದ ಗಲ್ಫ್ ದೇಶದಲ್ಲಿರುವ ಅತ್ಯಂತ ದೊಡ್ಡ ಮಾಲ್ ಗಳಲ್ಲಿ ಒಂದಾದ ಲುಲು ಹೈಪರ್ ಮ್ಯಾಕೇಟ್ (Lulu Hypermarket ) ಗೆ ಗೋಲಿ ಸೋಡಾದ ನಿರಂತರ ಪೂರೈಕೆಯ ಭರವಸೆ ಪ್ರಾಧಿಕಾರ ನೀಡಿದೆ.
ಭಾರತದ ಹಲವಾರು ಸಾಂಪ್ರದಾಯಿಕ ಉತ್ಪನ್ನಗಳು ವಿದೇಶಿ ನೆಲದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಈಗ ಅದರ ಲಿಸ್ಟ್ ಗೆ ಗೋಲಿ ಸೋಡಾ ಕೂಡ ಸೇರಿದೆ.