Holiday for School : ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. ಕೇಂದ್ರ ಮತ್ತು ರಾಜ್ಯದ ಅಧಿಕೃತ ರಜೆಯ ಜೊತೆಗೆ ಕರ್ನಾಟಕದ ರಜೆಯ ಲಿಸ್ಟ್ ಗೆ ಈ ವರ್ಷ ಇನ್ನೊಂದು ರಜೆ ಸೇರಲಿದೆ. ಈ ವರುಷ ಇನ್ನೊಂದು ಹಬ್ಬ ಆಚರಣೆಗೆ ಮಕ್ಕಳು ಮತ್ತು ಪೋಷಕರಿಗೆ ದಕ್ಷಿಣ ಭಾರತದ 3 ರಾಜ್ಯಗಳು ಸಿಹಿ ಸುದ್ದಿಯೊಂದನ್ನು ಕೊಟ್ಟಿದೆ.
ಹೌದು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಈ ದಿವಸ ಒಂದು ದಿನ ಸರಕಾರಿ ರಜೆ ಘೋಷಣೆಯಾಗಿದೆ. ಈಗಾಗಲೇ ಮಳೆ ಮತ್ತು ಇನ್ನಿತರ ಪ್ರಕೃತಿ ವಿಕೋಪದ ಕಾರಣ ಕರ್ನಾಟಕದ ಕೆಲ ಭಾಗಗಳಲ್ಲಿ ಬಹಳಷ್ಟು ರಜೆ ಘೋಷಣೆ ಮಾಡಬೇಕಾದ ಪರಿಸ್ಥಿತಿ ರಾಜ್ಯ ಸರಕಾರಕ್ಕೆ ಬಂದೊದಗಿತ್ತು. ಆದರೂ ಹಬ್ಬದ ಸಂಭ್ರಮವನ್ನು ಗಮನದಲ್ಲಿ ಇಟ್ಟುಕೊಂಡು ಈ ಮೂರೂ ಸರಕಾರಗಳು ಒಳ್ಳೆಯ ನಿರ್ಧಾರವನ್ನು ಕೈಗೊಂಡಿದೆ.
ಆದರೆ ಬನ್ನಿ ನೋಡೋಣ ಯಾವ ಆ ದಿವಸ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿರುಹುದು ಎಂಬುಹುದನ್ನು. ಫೆಬ್ರವರಿ 26, 2025 ನೇ ಬುಧವಾರ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಮಹಾ ಶಿವರಾತ್ರಿಯ ಹಬ್ಬದ ದಿನ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಒಂದು ದಿನದ ರಜೆಯನ್ನು ಘೋಷಿಸಿದ್ದಾರೆ.
ಪ್ರತಿ ಚಂದ್ರಮಾಸದ ಹದಿನಾಲ್ಕನೇ ದಿನ ಅಥವಾ ಅಮಾವಾಸ್ಯೆಯ ಹಿಂದಿನ ದಿನವನ್ನು ಶಿವರಾತ್ರಿ ಎಂದು ಕರೆಯಲಾಗುತ್ತದೆ ಕ್ಯಾಲೆಂಡರ್ ವರುಷಗಳಲ್ಲಿ ಬರುವ ಎಲ್ಲಾ ಹನ್ನೆರಡು ಶಿವರಾತ್ರಿಗಳಲ್ಲಿ, ಮಹಾಶಿವರಾತ್ರಿ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಬರುತ್ತದೆ ಮತ್ತು ಇದು ಒಂದು ಅತ್ಯಂತ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ.