ಕಡೇಶ್ವಾಲ್ಯ: ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ವ್ಯವಸಾಯ ಸೇವಾ ಸಹಕಾರಿ ಸಂಘ, ನಿಯಮಿತ ಕಡೇಶ್ವಾಲ್ಯ ಇದರ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 19ರಂದು ನಡೆಯಿತು.
ಮಹಾಸಭೆಯಲ್ಲಿ ಕಡೇಶ್ವಾಲ್ಯ ಗ್ರಾಮದ ಪೆರ್ಲಾಪು ಶ್ರೀ ಹರ್ಷ ನವೋದಯ ಸ್ವಸಹಾಯ ಗುಂಪನ್ನು ಉತ್ತಮ ಸ್ವಸಹಾಯ ಗುಂಪು ಎಂದು ಪರಿಗಣಿಸಿ ಗೌರವಿಸಲಾಯಿತು.
ಗುಂಪಿನ ಉತ್ತಮ ಕಾರ್ಯಚಟುವಟಿಕೆಗಳು ಹಾಗೂ ಸಂಘದೊಂದಿಗೆ ಹೊಂದಿರುವ ಸಹಕಾರವನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ವಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.





