20 September 2026 |

ಕಡೇಶ್ವಾಲ್ಯ ಸಹಕಾರಿ ಸಂಘದ ವಾರ್ಷಿಕ ಸಭೆಯಲ್ಲಿ ‘ನೇಸರ’ ನವೋದಯ ಸ್ವಸಹಾಯ ಸಂಘ ಉದ್ಘಾಟನೆ

  • 20 Sep 2026 11:40:36 AM

ಕಡೇಶ್ವಾಲ್ಯ: ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಕಡೇಶ್ವಾಲ್ಯ ಇದರ 2025-2026ನೇ ಸಾಲಿನ ವಾರ್ಷಿಕ ಮಹಾ ಸಭೆ ದಿನಾಂಕ 19-09-2026ನೇ ಶನಿವಾರ ಪೆರ್ಲಾಪು ಸಂಘದ ವಠಾರ ದಲ್ಲಿ ಜರಗಿತು.

 

ಈ ಸಭೆಯಲ್ಲಿ ಬರಿಮಾರು ಗ್ರಾಮದ ಪಂಜುರ್ಲಿ ಗುಡ್ಡೆಯಲ್ಲಿ ಇತ್ತೀಚ್ಚೆಗೆ ರಚನೆಗೊಂಡು ಖಾತೆ ಹೊಂದಿರುವ " ನೇಸರ "ನವೋದಯ ಸ್ವ ಸಹಾಯ ಗುಂಪನ್ನು ನಿರ್ಣಯ ಪುಸ್ತಕ ನೀಡುವ ಮೂಲಕ ಸಂಘದ ಅಧ್ಯಕ್ಷರಾದ ಶ್ರೀ ವಿದ್ಯಾಧರ್ ರೈ ಯವರು ಉದ್ಘಾಟನೆ ಮಾಡಿದರು.

 

ಈ ಸಂದರ್ಭದಲ್ಲಿ ನವೋದಯ ಸ್ವ ಸಹಾಯ ಗುಂಪು ಗಳ ವಲಯ ಪ್ರೇರಕ ಡಿ ಸಂಜೀವ ಪೂಜಾರಿ ದಾಸಕೋಡಿ ಇವರನ್ನು ಸಂಘದ ಅಧ್ಯಕ್ಷರು ಗೌರವಿಸಿದರು.

 

ನೇಸರ ನವೋದಯ ಸ್ವ ಸಹಾಯ ಸಂಘದ ಅಧ್ಯಕ್ಷೆ ಶ್ರೀಮತಿ ಅಶ್ವಿನಿ, ಸದಸ್ಯರಾದ ಚಂದ್ರಮುಖಿ, ಸುಂದರಿ, ಮೀನಾಕ್ಷಿ, ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಶ್ರೀ ಸುಬ್ರಮಣ್ಯ ಪ್ರಸಾದ್, ಸಂಘದ ಉಪಾಧ್ಯಕ್ಷರಾದ ಶಿವಾನಂದ ದರ್ಬೆ, ನಿರ್ದೇಶಕರು ಉಪಸ್ಥಿತರಿದ್ದರು