ಕಡೇಶಿವಾಲಯ: ಮಹತೋಭಾರ ಚಿಂತಾಮಣಿ ಕಡೇಶಿವಾಲಯ ಶ್ರೀ ಲಕ್ಷ್ಮೀ ನರಸಿಂಹ ದೇವರ ಸಾನಿಧ್ಯದಲ್ಲಿ ಸಂಕಷ್ಟ ಚತುರ್ಥಿಯ ಪ್ರಯುಕ್ತ ಶ್ರೀ ಗಣಪತಿ ದೇವರಿಗೆ ದಿನಾಂಕ 14ನೇ ಜುಲೈ 2025 ನೇ ಸೋಮವಾರ ಪೂರ್ವಾಹ್ನ 10.00ಗಂಟೆಗೆ ವಿಶೇಷ "ಗಣಹೋಮ" ಮತ್ತು "ಅಪ್ಪದಪೂಜೆ" ಸೇವೆ ಜರಗಲಿದೆ.
ಮತ್ತು ಅದೇ ದಿನ ನಮ್ಮ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಶ್ರೀ ಕುಸುಮೋಧರ.ಡಿ. ಶೆಟ್ಟಿ ನಡುಮೊಗರುಗುತ್ತು, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಭವಾನಿ ಸಮೂಹ ಸಂಸ್ಥೆ ಮುಂಬೈ, ಇವರ "ಪದವಿ ಸ್ವೀಕಾರ ಸಮಾರಂಭ"ವು ನಮ್ಮ ಶ್ರೀ ಕ್ಷೇತ್ರದಲ್ಲಿ ಪೂರ್ವಾಹ್ನ 11.00 ಗಂಟೆಗೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಪುರುಷೋತ್ತಮ ಶೆಟ್ಟಿ ನುಳಿಯಾಲು (ನಡ್ಯೇಲು) ಇವರ ಅಧ್ಯಕ್ಷತೆಯಲ್ಲಿ ಜರಗಲಿದೆ.
ಅಂದು ದಿವ್ಯ ಸಾನಿಧ್ಯ ವಹಿಸುವ ಸ್ವಾಮೀಜಿಗಳು ಮತ್ತು ಗಣ್ಯ ಅತಿಥಿಗಳು ಆಗಮಿಸಲಿದ್ದು, ಭಕ್ತಾದಿಗಳು ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಲ್ಲಾ ಗಣ್ಯರನ್ನು ಹಾಗೂ ಸ್ವಾಮೀಜಿಯವರನ್ನು ಆದರದಿಂದ ಸ್ವಾಗತಿಸಬೇಕಾಗಿ ಕೇಳಿಕೊಳ್ಳುತ್ತೇವೆ ಎಂದು ಅಧ್ಯಕ್ಷರು ಮತ್ತು ಸದಸ್ಯರು ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಕಡೇಶಿವಾಲಯ ಮನವಿ ಮಾಡಿಕೊಂಡಿದ್ದಾರೆ.