31 January 2026 | Join group

ರಾಜ್ಯದಲ್ಲಿ ಪಂಚ ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ 500 ಕೋಟಿ ತಲುಪಿದ ಅಂಗವಾಗಿ 'ಶಕ್ತಿ ಸಂಗ್ರಮ' ಕಾರ್ಯಕ್ರಮ

  • 13 Jul 2025 04:49:14 PM

ಬಂಟ್ವಾಳ: ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಬಂಟ್ವಾಳ ತಾಲೂಕು ಇದರ ವತಿಯಿಂದ, ಕರ್ನಾಟಕ ರಾಜ್ಯದಲ್ಲಿ ಫಲಾನುಭವಿಗಳ ಸಂಖ್ಯೆ 500 ಕೋಟಿ ತಲುಪಿದ ಅಂಗವಾಗಿ 'ಶಕ್ತಿ ಸಂಗ್ರಮ' ಕಾರ್ಯಕ್ರಮ ಆಯೋಜಿಸಲಾಗಿದೆ.

 

ಜುಲೈ 14 ರಂದು ಸೋಮವಾರ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣ, ಬಿ.ಸಿ ರೋಡಿನಲ್ಲಿ ಬೆಳಗ್ಗೆ 10:00 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಲಾಗಿದೆ.

 

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಬಂಟ್ವಾಳ ತಾಲೂಕು 'ನಮ್ಮ ಗ್ಯಾರಂಟಿ, ಶಕ್ತಿ ಯೋಜನೆ'ಯ ಸಂಭ್ರಮಾಚರಣೆಯ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಬಯಸುತ್ತಿದೆ.