ಕಲ್ಲಡ್ಕ: ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಹಿರಿಯ ವಿದ್ಯಾರ್ಥಿ ಸಂಘಗಳನ್ನು ರಚಿಸಬೇಕು ಎಂಬ ಆದೇಶದಂತೆ, ಕುದ್ರೆಬೆಟ್ಟು ಅಂಗನವಾಡಿಯಲ್ಲಿ *“ಅಕ್ಷರದೀಪ ಹಿರಿಯ ವಿದ್ಯಾರ್ಥಿ ಸಂಘ”*ವನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಂದರ ಸಾಲಿಯನ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಅಂಗನವಾಡಿ ಶಿಕ್ಷಕಿ ಸುರೇಖಾ, ಸಹಾಯಕಿ ಜಯಂತಿ, ಆಶಾ ಕಾರ್ಯಕರ್ತೆ ಸುಜಾತ ಎಂ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಸುಜಾತ ಗಿರೀಶ್ ಧರ್ಮದ ಬಳ್ಳಿ ಇವರ ಸಾನಿಧ್ಯದಲ್ಲಿ ಎರಡು ವರ್ಷದ ಅವಧಿಗೆ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹೇಮಂತ್ ಕುಮಾರ್ ಬೋಲ್ಪೋಡಿ, ಉಪಾಧ್ಯಕ್ಷರಾಗಿ ಸತೀಶ್ ಮೇಸ್ತ್ರಿ, ಕಾರ್ಯದರ್ಶಿಯಾಗಿ ರಂಜಿತ್ ಪುರ್ಲಿಪಾಡಿ, ಕೋಶಾಧಿಕಾರಿಯಾಗಿ ಅಮಿತಾ ಎಲ್ತಿಮಾರ್, ಜೊತೆಯ ಕಾರ್ಯದರ್ಶಿಯಾಗಿ ನವೀನ್ ಮಪಲ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಕುಧ್ರಬೆಟ್ಟು ಶಾಲೆಯ ಮಾಜಿ SCDMC ಅಧ್ಯಕ್ಷ ರಮೇಶ್ ಕುದ್ರೆಬೆಟ್ಟು, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಾಜ್, ಲೋಕೇಶ್ ಬೈಲು, ಮಾದವ ಸಾಲಿಯನ್, ಪ್ರಶಾಂತ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.