ಮಂಗಳೂರು: ಸಾಹಿತ್ಯ ಲೋಕದ ಧ್ರುವತಾರೆ ಶ್ರೀ ಎಸ್. ಎಲ್. ಭೈರಪ್ಪನವರಿಗೆ ವಿವಿಧ ಸಂಘ ಸಂಸ್ಥೆಗಳು, ಸಾಹಿತ್ಯಾಸಕ್ತರು, ಹಾಗೂ ಸಮಾಜದ ವಿವಿಧ ಸ್ತರದ ಗಣ್ಯರ ಒಗ್ಗೂಡುವಿಕೆಯಲ್ಲಿ ಭುವನೇಂದ್ರ ಸಭಾಭವನ, ಕೆನರಾ ವಿದ್ಯಾ ಸಂಸ್ಥೆ, ಡೊಂಗರಕೇರಿಯಲ್ಲಿ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ನಗರ ಶಾಸಕರಾದ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಕ್ಯಾ. ಗಣೇಶ ಕಾರ್ನಿಕ್ ಮತ್ತು ಇನ್ನಿತರ ಪ್ರಮುಖರು ಭಾಗವಹಿಸಿದ್ದರು.