06 August 2026 |

ನ್ಯೂಮೋನಿಯಾ ಜ್ವರಕ್ಕೆ 12 ವರ್ಷದ ವಿದ್ಯಾರ್ಥಿನಿ ಬಲಿ

  • 06 Aug 2026 08:40:38 AM

ಮಂಗಳೂರು: ನ್ಯೂಮೋನಿಯಾ ಜ್ವರದಿಂದ ಬಳಲುತ್ತಿದ್ದ 12 ವರ್ಷದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ದುರ್ಘಟನೆ ಮಂಗಳೂರು ಸಮೀಪದ ಗುರುಪುರ-ಕೈಕಂಬ ಸಮೀಪದ ಕಂದಾವರದಲ್ಲಿ ಮಂಗಳವಾರ ನಡೆದಿದೆ.

 

ಮೃತ ವಿದ್ಯಾರ್ಥಿನಿಯನ್ನು ಋತ್ವಿ (12) ಎಂದು ಗುರುತಿಸಲಾಗಿದೆ. ಆಕೆ ಛಾಯಾಗ್ರಾಹಕ ದೀಪಕ್ ಕೋಟ್ಯಾನ್ ಹಾಗೂ ಜಯಶ್ರೀ ದಂಪತಿಯ ಪುತ್ರಿಯಾಗಿದ್ದಳು.

 

ಗುರುಪುರ-ಕೈಕಂಬದ ಕಿನ್ನಿಕಂಬಳದಲ್ಲಿರುವ ಬೆಥಣಿ ಸಿಬಿಎಸ್‌ಇ ಶಾಲೆಯ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಋತ್ವಿ ಕಳೆದ ಒಂದು ವಾರದಿಂದ ನ್ಯೂಮೋನಿಯಾ ಜ್ವರದಿಂದ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ಕುಟುಂಬಸ್ಥರು ಮತ್ತು ಪರಿಚಿತರಲ್ಲಿ ದುಃಖ ಮೂಡಿಸಿದೆ.