ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಹುದ್ದೆ ಅಲಂಕರಿಸಿ ಇಂದಿಗೆ 11 ವರ್ಷಗಳಾಗಿವೆ. 2014 ರ ಮೇ 26 ರಂದು ಮೋದಿ ಪ್ರಥಮವಾಗಿ ಅಧಿಕಾರ ಸ್ವೀಕರಿಸಿದರು. ಮನಮೋಹನ್ ಸಿಂಗ್ 10 ವರ್ಷದ ಆಳ್ವಿಕೆಯ ನಂತರ ದೇಶದ ಜನತೆ ಮೋದಿಯವರ ಬಿಜೆಪಿ ಪಕ್ಷಕ್ಕೆ ಪೂರ್ಣಪ್ರಮಾಣದ ಬಹುಮತ ನೀಡಿ ಮೊದಲ ಬಾರಿಗೆ ದೇಶದ ಪ್ರಧಾನಿ ಚುಕ್ಕಾಣಿ ಹಿಡಿಯಲು ಕಾರಣೀಕರ್ತರಾಗಿದ್ದರು.
2014 ರಿಂದ 2019 ರ ವರೆಗಿನ ಆಡಳಿತ ನಡೆಸಿದ ನಂತರ 2019 ರಲ್ಲಿ ಮತ್ತೊಮ್ಮೆ ಮೋದಿ ಸರಕಾರ ಅಸ್ತಿತ್ವಕ್ಕೆ ಬಂತು. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಸಿಗದೇ ಇದ್ದರು ಸಹ ಎನ್ ಡಿ ಎ ಮಿತ್ರಪಕ್ಸಗಳ ಬೆಂಬಲದೊಂದಿಗೆ ಮತ್ತೂಮ್ಮೆ 5 ವರುಷಗಳ ಕಾಲ ಮತ್ತೆ ಪ್ರಧಾನಿ ಪಟ್ಟಕ್ಕೇರಿದರು. ಆದ್ದರಿಂದ ನರೇಂದ್ರ ಮೋದಿಯವರು ಸತತ 11 ವರ್ಷಗಳ ಕಾಲ ಅಧಿಕಾರದಲ್ಲಿದ್ದಾರೆ.
ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ " ಭಾರತ ಇಂದು ಐತಿಹಾಸಿಕ ಮೈಲಿಗಲ್ಲನ್ನು ತಲುಪಿದ್ದು ಶ್ರೀ @NarendraModi ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನ ಮಂತ್ರಿಯಾಗಿ 11 ವರ್ಷಗಳನ್ನು ಪೂರೈಸಿದ್ದಾರೆ" ಎಂದು ತನ್ನ ಎಕ್ಸ್ ಅಕೌಂಟ್ ನಲ್ಲಿ ಬರೆದಿದ್ದಾರೆ.
"ಎಂತಹ ಪ್ರಯಾಣ ಇದು. 'ದುರ್ಬಲ ಐದು' ರಾಷ್ಟ್ರಗಳಲ್ಲಿ ಒಂದಾಗಿ ಹಣೆಪಟ್ಟಿ ಕಟ್ಟಿಕೊಳ್ಳುವುದರಿಂದ ಹಿಡಿದು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವವರೆಗೆ, ಭಾರತವು ಅವರ ನಿರ್ಣಾಯಕ ನಾಯಕತ್ವದಲ್ಲಿ ಪುನರುಜ್ಜೀವನವನ್ನು ಕಂಡಿದೆ".
"ಕ್ರಾಂತಿಕಾರಿ ಸುಧಾರಣೆಗಳಿಂದ ಹಿಡಿದು ಎಲ್ಲರನ್ನೂ ಒಳಗೊಳ್ಳುವ ಕಲ್ಯಾಣದವರೆಗೆ, ಪ್ರಧಾನಿ ಮೋದಿ ಜಿ ಅವರ ಆಡಳಿತವು ಪ್ರತಿಯೊಬ್ಬ ನಾಗರಿಕನನ್ನು ಮುಟ್ಟಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಮಂತ್ರದಿಂದ ನಡೆಸಲ್ಪಡುವ 2047 ರ ವೇಳೆಗೆ ವಿಕ್ಷಿತ್ ಭಾರತಕ್ಕಾಗಿ ಅವರ ದೃಷ್ಟಿಕೋನವು ಎಲ್ಲಾ ಭಾರತೀಯರಿಗೆ ಮಾರ್ಗವನ್ನು ರೂಪಿಸಿದೆ".
ಇದನ್ನೂ ಓದಿ: ಬಿಜೆಪಿ ನಾಯಕರಿಗೆ ಮೋದಿ ಎಚ್ಚರಿಕೆ..ಬಾಯಿ ಮುಚ್ಚಿಕೊಂಡಿರಿ! ಆಪರೇಷನ್ ಸಿಂಧೂರ್ ಬಗ್ಗೆ ಅನವಶ್ಯಕ ಹೇಳಿಕೆ ಬೇಡ
ಮೋದಿಯವರ ನಾಯಕತ್ವದಲ್ಲಿ ಇನ್ನೂ ಹಲವು ವರ್ಷಗಳ ಪ್ರಗತಿ, ಉದ್ದೇಶ ಮತ್ತು ಸಮೃದ್ಧಿಯಗಲಿ ಎಂದು ತಮ್ಮ ಆಶಯವನ್ನು ತೇಜಸ್ವಿ ಸೂರ್ಯ ವ್ಯಕ್ತಪಡಿಸಿದ್ದಾರೆ.