ಇಸ್ರೇಲ್ ದಾಳಿ:ಗಾಜಾದ ಮೇಲೆ ನಿರಂತರವಾಗಿ ದಾಳಿ, ಹಲವಾರು ನಾಗರಿಕರ ಬಲಿ

  • 05 Jun 2025 02:41:05 PM

ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಹಲವಾರು ಪೌರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಸುಮಾರು 95 ಜನ ಮೃತಪಟ್ಟು, ಕನಿಷ್ಠ 440 ನಾಗರಿಕರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

 

ಇತ್ತ, ಗಾಜಾದ ನಾಗರಿಕರು ಮತ್ತೊಂದು ದೊಡ್ಡ ಮಾನವೀಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಗಾಜಾದ ಮೂರು ಮಾನವೀಯ ಸಹಾಯ ಕೇಂದ್ರಗಳಿಗೆ ಗುಂಡಿನ ದಾಳಿ ನಡೆದಿದ್ದು, ಸಹಾಯ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

 

ಈ ವಿತರಣಾ ಕೇಂದ್ರಗಳಿಗೆ ನಡೆದ ದಾಳಿಯ ಹಿನ್ನೆಲೆಯಲ್ಲಿ, ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೇವೆಗಳು ಅಸ್ತವ್ಯಸ್ತವಾಗಿವೆ. ರೆಡ್ ಕ್ರಾಸ್ ಸಂಸ್ಥೆಯ ವರದಿಯಂತೆ, ಇದೇ ಎರಡು ದಿನಗಳ ಹಿಂದೆ ನಡೆದ ದಾಳಿಯಲ್ಲಿ 27 ಜನರು ಪ್ರಾಣಕಳೆದುಕೊಂಡಿದ್ದಾರೆ.

 

ಅಂತರಾಷ್ಟ್ರೀಯ ಸಮುದಾಯದಿಂದ ಗಾಜಾದ ಈ ಪರಿಸ್ಥಿತಿಗೆ ತಕ್ಷಣದ ಮಾನವೀಯ ಸ್ಪಂದನೆ ಅಗತ್ಯವಾಗಿದೆ ಎಂದು ಹಲವಾರು ಸಂಸ್ಥೆಗಳು ಒತ್ತಾಯಿಸುತ್ತಿವೆ.