20 June 2025 | Join group

ಕಾಶ್ಮೀರದಲ್ಲಿ ವಿಶ್ವದ ಅತೀ ಎತ್ತರದ ಐಕಾನಿಕ್ ರೈಲ್ವೆ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ

  • 06 Jun 2025 09:20:39 PM

ಕಾಶ್ಮೀರ: ಪ್ರಧಾನಿ ಮೋದಿ ವಿಶ್ವದ ಅತೀ ದೊಡ್ಡ ಮತ್ತು ಎತ್ತರದ ಚೆನಾಬ್ ಸೇತುವೆಯನ್ನು ಉದ್ಘಾಟನೆ ಮಾಡಿದ್ದಾರೆ. ಕಾಶ್ಮೀರದಲ್ಲಿ ಕಟ್ಟಿರುವ ಈ ಸೇತುವೆ ವಿಶ್ವದ ಐಕಾನಿಕ್ ಸೇತುವೆಯಾಗಿದೆ.

 

ಭಾರತೀಯ ರೈಲ್ವೆ ನಿರ್ಮಾಣದ ಹೊಸ ಯುಗದ ಆರಂಭದ ಸಂಕೇತವೂ ಆಗಿದೆ ಈ ಸೇತುವೆ. 

 

ಚೆನಾಬ್ ನದಿಯಿಂದ 359 ಮೀಟರ್ ಎತ್ತರದಲ್ಲಿರುವ, 15 ಬಿಲಿಯನ್ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. 

 

1,315 ಮೀ ಉದ್ದದ ಉಕ್ಕಿನ ಕಮಾನು ಸೇತುವೆಯನ್ನು ಬಹಳ ಪ್ರಬಲವಾಗಿ ಕಟ್ಟಲಾಗಿದ್ದು, ಕಠಿಣ ಭೂಕಂಪ ಮತ್ತು ಬಿರುಗಾಳಿಯ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ