ಸಮುದ್ರದ ಮಧ್ಯೆ ಸ್ಫೋಟಗೊಂಡ ಬೃಹತ್ ಹಡಗು : ಸಮುದ್ರದಲ್ಲಿ ಅಲ್ಲೋಲ ಕಲ್ಲೋಲ

  • 09 Jun 2025 06:38:52 PM

ಕೇರಳ: ಇಂದು ಬೆಳಿಗ್ಗಿನ ಜಾವಾ ಕೇರಳ ದ ಕರಾವಳಿ ಯಲ್ಲಿ ಹಡಗೊಂದು ಸ್ಫೋಟಗೊಂಡ ಬಗ್ಗೆ ವರದಿಯಾಗಿದೆ.

 

ಕೊಲಂಬೋದಿಂದ - ಮುಂಬೈಗೆ ಸರಕುಗಳನ್ನು ಹೊತ್ತುಕೊಂಡು ಬರುತ್ತಿದ್ದ ಸಿಂಗಾಪುರದ ಧ್ವಜ ಹೊತ್ತ ಕಂಟೇನರ್ ಹಡಗು ಎಂವಿ ವಾನ್ ಹೈ 503ನಲ್ಲಿ ಸ್ಫೋಟ ಸಂಭವಿಸಿದೆ.

 

ಭಾರತೀಯ ನೌಕಾಪಡೆ ತ್ವರಿತ ಪ್ರತಿಕ್ರಿಯೆ ನೀಡಿದ್ದು, ಹೆಚ್ಚಿನ ಅನಾಹುತಗಳನ್ನು ತಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಸಂಬಂಧಪಟ್ಟ ಮೂಲಗಳಿಗೆ ತಿಳಿಸಿದ್ದಾರೆ.

 

270 ಮೀ ಉದ್ದ ಮತ್ತು 12.5 ಮೀ ಡ್ರಾಫ್ಟ್ ಹೊಂದಿರುವ ಈ ಹಡಗಿನ ಅಂಡರ್ ಡೆಕ್ ಸ್ಫೋಟಗೊಂಡಿದೆ. ಒಟ್ಟು 20 ಕಂಟೇನರ್ ಗಳು ಹೊತ್ತಿ ಉರಿದಿದೆ. ನೌಕೆಯಲ್ಲಿದ್ದ 22 ಕಾರ್ಮಿಕರನ್ನು ಭಾರತೀಯ ನೌಕಾಪಡೆ ಮತ್ತು ಅಗ್ನಿಶಾಮಕ ದಳ ರಕ್ಷಣೆ ಮಾಡಿದೆ. 

 

ಈ ಹಡಗು ಜೂನ್ 7 ರಂದು ಕೊಲಂಬೋ ದಿಂದ ಹೊರಟಿದ್ದು, ಜೂನ್ 10 ರ ಒಳಗೆ ಮುಂಬಯಿ ತಲುಪಬೇಕಾಗಿತ್ತು ಆದರೆ ಈ ಸ್ಪೋಟದಿಂದ ಹಡಗಿಗೆ ಭಾರಿ ಹಾನಿಯಾಗಿದ್ದು, ದುರಸ್ತಿ ನಂತರವೇ ಅದನ್ನು ಚಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.