01 February 2026 | Join group

ಪಶ್ಚಿಮ ಬಂಗಾಳ: ಅಶ್ಲೀಲ ಚಿತ್ರದಲ್ಲಿ ನಟಿಸಲು ಒಪ್ಪದ ಕಾರಣ ಯುವತಿಯೊಬ್ಬಳಿಗೆ ಭೀಕರ ಚಿತ್ರಹಿಂಸೆ!

  • 11 Jun 2025 12:55:46 PM

ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಯುವತಿಯೊಬ್ಬಳನ್ನು 6 ತಿಂಗಳು ಬಂಧನದಲ್ಲಿರಿಸಿ ಭೀಕರ ಶಿಕ್ಷೆ ನೀಡಿದ ಘಟನೆ ವರದಿಯಾಗಿದೆ.

 

ಆರ್ಯನ್ ಖಾನ್ ಮತ್ತು ಶ್ವೇತಾ ಖಾನ್ ಎಂಬವರು ಯುವತಿ ಅಶ್ಲೀಲ ಚಿತ್ರದಲ್ಲಿ ನಟಿಸಿಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಆಕೆಯ ಖಾಸಗಿ ಅಂಗಕ್ಕೆ ರೋಡ್ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದೆ.

 

ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಲು ಮತ್ತು ಬಾರ್ ಡ್ಯಾನ್ಸರ್ ಆಗುವಂತೆ ಆರ್ಯನ್ ಖಾನ್ ಮತ್ತು ಆತನ ತಾಯಿ ಯುವತಿಯನ್ನು ಒತ್ತಾಯಿಸಿದ್ದರು. ಯುವತಿ ಇವರ ಮಾತು ಕೇಳದೆ ಇದ್ದಾಗ ಈ ರೀತಿಯ ಚಿತ್ರಹಿಂಸೆ ನೀಡಿದ್ದಾರೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾಳೆ.

 

6 ತಿಂಗಳ ಶಿಕ್ಷೆಯನ್ನು ಅನುಭವಿಸಿ, ಅಂತಿಮವಾಗಿ ಯುವತಿ ಅಲ್ಲಿಂದ ತಪ್ಪಿಸಲು ಯಶಸ್ವಿಯಾಗಿದ್ದು, ದೇಹದಾದ್ಯಂತ ಗೋಚರಿಸುವ ಗಾಯಗಳೊಂದಿಗೆ ಪತ್ತೆಯಾಗಿದ್ದಾಳೆ. ಸದ್ಯ ಸಂತ್ರಸ್ತೆಯು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಎಂದು ವರದಿಯಾಗಿದೆ.

 

ಇದೀಗ ಪ್ರಕರಣವು ರಾಜಕೀಯ ತಿರುವನ್ನು ಕೂಡ ಪಡೆದಿದೆ. ಆರೋಪಿಗಳೊಂದಿಗೆ ಟಿಎಂಸಿ ಪಕ್ಷವು ಸಂಪರ್ಕದಲ್ಲಿದೆ ಎಂದು ಬಿಜೆಪಿ ಆರೋಪಿಸಿದೆ.