20 June 2025 | Join group

ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಇಸ್ಲಾಂ ಧರ್ಮ: ಕ್ರಿಶ್ಚಿಯನ್ ಮತ್ತು ಹಿಂದೂಗಳ ಸಂಖ್ಯೆಯಲ್ಲಿ ಕುಸಿತ - ಪ್ಯೂ ವರದಿ

  • 12 Jun 2025 01:08:23 AM

ಪ್ಯೂ ಸಂಶೋಧನಾ ಕೇಂದ್ರ (Pew Research Center) ಸರಿಸುಮಾರು 2700 ಕ್ಕೂ ಹೆಚ್ಚು ಜನಗಣತಿ ಮತ್ತು ಸಮೀಕ್ಷೆಗಳನ್ನು ನಡೆಸಿ 2010 ರಿಂದ 2020 ರವರೆಗೆ ವಿಶ್ವದ ಧರ್ಮಾಧಾರಿತ ಜನಗಣತಿಯನ್ನು ಪ್ರಕಟ ಪಡಿಸಿದೆ.

 

ಆ ಸಂಸ್ಥೆಯ ಸಮೀಕ್ಷೆ ಪ್ರಕಾರ, ಒಂದನೇ ಸ್ಥಾನದಲ್ಲಿರುವ ಕ್ರಿಶ್ಚಿಯನ್ನರು ವಿಶ್ವದ ಅತಿದೊಡ್ಡ ಧಾರ್ಮಿಕ ಗುಂಪಾಗಿ ಉಳಿದಿದ್ದಾರೆ ಆದರೆ ಕ್ರಿಶ್ಚಿಯನ್ ಎಲ್ಲಾ ಪಂಗಡಗಳನ್ನು ಒಂದೇ ಗುಂಪಲ್ಲಿ ಸೇರಿಸಿ ನೋಡಿದಾಗ ಜನಸಂಖ್ಯೆಯಲ್ಲಿ ಯಾವುದೇ ಮಹತ್ತರ ಬೆಳವಣಿಗೆ ಕಂಡುಬಂದಿಲ್ಲ. ಕ್ರಿಶ್ಚಿಯನ್ನರ ಒಟ್ಟು ಸಂಖ್ಯೆ 122 ಮಿಲಿಯನ್ ಏರಿಕೆಯಾಗಿ 2.3 ಬಿಲಿಯನ್ ತಲುಪಿದೆ ಆದರೂ, ಹಿಂದಿನ ಒಟ್ಟು ಜನಸಂಖ್ಯೆಯಿಂದ ಶೇಕಡವಾರು 1.8 ರಿಂದ ಕೆಳಗೆ ಇಳಿದು ಸದ್ಯ ಒಟ್ಟು ವಿಶ್ವದ ಜನಸಂಖ್ಯೆಯ ಶೇ. 28.8 ಕ್ಕೆ ತಲುಪಿದೆ.

 

ಎರಡನೇ ಸ್ಥಾನದಲ್ಲಿರುವ ಮುಸ್ಲಿಮರ ಎಲ್ಲಾ ಪಂಗಡಗಳನ್ನು ಸೇರಿಸಿದಾಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧಾರ್ಮಿಕ ಗುಂಪು ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಕಳೆದ ದಶಕದಲ್ಲಿ (2010 ರಿಂದ 2020 ರ ವರೆಗೆ) ಮುಸ್ಲಿಮರ ಸಂಖ್ಯೆ 347 ಮಿಲಿಯನ್ ಹೆಚ್ಚಾಗಿದೆ. ಮುಸ್ಲಿಮರ ಪಾಲು ಶೇ 1.8 ರಷ್ಟು ಹೆಚ್ಚಾಗಿ ಈಗ ವಿಶ್ವದಲ್ಲಿ ಒಟ್ಟು ಜನಸಂಖ್ಯೆಯ 25.6% ಕ್ಕೆ ತಲುಪಿದೆ.

 

ನಾಲ್ಕನೇ ಸ್ಥಾನದಲ್ಲಿರುವ ಹಿಂದೂಗಳ ಬೆಳವಣಿಗೆಯಲ್ಲಿ ಸುಮಾರು 1.1 ಬಿಲಿಯನ್ ನಿಂದ 1.2 ಬಿಲಿಯನ್ ಗೆ ಏರಿದೆ. ಆದರೆ ವಿಶ್ವ ಜನಸಂಖ್ಯೆ ಪಾಲಿನಲ್ಲಿ ಹಿಂದೂಗಳ ಶೇಕಡಾವಾರು ಕಡಿಮೆಯಾಗಿದೆ. 2010 ರಿಂದ 2020 ರವರೆಗೆ ಲೆಕ್ಕಾಚಾರ ಹಾಕಿದಾಗ, 15% ನಿಂದ 14.9% ರ ಸ್ವಲ್ಪ ಕುಸಿತವನ್ನು ದಾಖಲಿಸಿದೆ. ಪ್ರಪಂಚದಾದ್ಯಂತ ಹಿಂದೂಗಳ ಒಟ್ಟಾರೆ ಬೆಳವಣಿಗೆಯನ್ನು ನೋಡಿದರೆ, ಅದು ಸ್ಥಿರವಾಗಿ ಉಳಿದಿದೆ.

 

ಈ ವರದಿ ಪ್ಯೂ ಸಂಶೋಧನಾ ಕೇಂದ್ರ (Pew Research Center) ಸಂಸ್ಥೆ ಪ್ರಕಟಿಸಿದ ಜನಸಂಖ್ಯಾ ಸಮೀಕ್ಷೆಯನ್ನು ಅವಲಂಬಿಸಿದೆ. ಅವರ ವರದಿಯಲ್ಲಿ ವಿಶ್ವದ ಪ್ರತಿಯೊಂದು ಧರ್ಮದ ಜನಸಂಖ್ಯೆಯ ವಿವರವನ್ನು ವಿಸ್ತಾರವಾಗಿ ನೀಡಲಾಗಿದೆ.