ಅಹಮದಾಬಾದ್ ವಿಮಾನ ದುರಂತದಲ್ಲಿದ್ದ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ ರೂಪಾಣಿ ದುರ್ಮರಣ

  • 12 Jun 2025 04:12:54 PM

ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗುವ ಸಮಯದಲ್ಲಿ ಏರ್ ಇಂಡಿಯಾ AI-787 ಪತನವಾಗಿದ್ದು, ಸಾವು ನೋವುಗಳ ಬಗ್ಗೆ ಇನ್ನಷ್ಟೇ ತಿಳಿಯಬೇಕಾಗಿದೆ.

 

ಇದೀಗ ತಿಳಿದು ಬಂದ ವಿಚಾರವೇನೆಂದರೆ, ಲಂಡನ್ ಗೆ ಪ್ರಯಾಣ ಬೆಳೆಸಿದ್ದ ಈ ವಿಮಾನದಲ್ಲಿ ಗುಜರಾತಿನ ಮಾಜಿ ಮುಖ್ಯಮಂತ್ರಿ ವಿಜಯ ರೂಪಾಣಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ ಮತ್ತು ನಿಧನ ಹೊಂದಿದ್ದಾರೆ ಎಂಬ ಮಾಹಿತಿ ದೊರೆತ್ತಿದೆ.

  

ವಿಮಾನದಲ್ಲಿ ಸಿಬ್ಬಂದಿ ಸೇರಿ ಒಟ್ಟು 242 ಮಂದಿ ಪ್ರಯಾಣಿಸುತ್ತಿದ್ದರು. ವಿಮಾನ ಟೇಕ್ ಆಫ್ ಆದ ಕೇವಲ 10 ನಿಮಿಷದಲ್ಲೇ ಕೆಳಗೆ ಬೀಳಲು ಪ್ರಾರಂಭಿಸಿದ್ದು, ಪಕ್ಕದ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ವಿಮಾನಕ್ಕೆ ಸಂಪೂರ್ಣ ಹಿಡಿದಿದೆ.