ಅಹಮದಾಬಾದ್: ಗುಜರಾತಿನ ಮಾಜಿ ಮುಖ್ಯಮಂತ್ರಿ ವಿಜಯ ರೂಪಾಣಿ ಅವರು ತಮ್ಮ ಜೀವನದ ಕೊನೆಯ ಪಯಣವನ್ನು ಹಾರಾಟದಲ್ಲಿ ಪೂರೈಸಿದ್ದಾರೆ. ನಿನ್ನೆ, ಜೂನ್ 12 ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ 265 ಮಂದಿ ದುರ್ಮರಣವನ್ನು ಹೊಂದಿದ್ದು, ಅವರಲ್ಲಿ ರೂಪಾಣಿ ಕೂಡ ಒಬ್ಬರಾಗಿದ್ದಾರೆಂಬ ಸುದ್ದಿ ಇಡೀ ರಾಷ್ಟ್ರವನ್ನು ಕಂಗೊಳಿಸಿದೆ.
ಇಲ್ಲಿ ಒಂದು ಕಾಕತಾಳೀಯ ಗಮನ ಸೆಳೆಯುತ್ತಿದೆ – ಅದು ‘1206’ ಎಂಬ ಸಂಖ್ಯೆ. ಈ ಸಂಖ್ಯೆ ವಿಜಯ ರೂಪಾಣಿಯವರಿಗೆ ಅದೃಷ್ಟ ಸಂಖೆಯಾಗಿತ್ತು. ಅವರ ಮನೆಗೆ ಸೇರಿದ ಎಲ್ಲ ವಾಹನಗಳ ಸಂಖ್ಯೆಗಳಲ್ಲೂ ‘1206’ ಇತ್ತು. ತಾವು ಈ ಸಂಖ್ಯೆಯನ್ನು ಶ್ರದ್ಧೆಯಿಂದ ನಂಬಿದ್ದರು, ಅದೇ ಸಂಖ್ಯೆ ದುರಂತದ ದಿನಾಂಕವೂ ಆಗಿದೆ – 12/06, ಅಂದರೆ ಜೂನ್ 12.
ಅವರು ಅದೃಷ್ಟವೆಂದು ಭಾವಿಸಿದ್ದ ಸಂಖ್ಯೆಯೇ ಅವರ ಜೀವನದ ಮುಕ್ತಾಯಕ್ಕೆ ಕಾರಣವಾಗುತ್ತದೆ ಎಂಬುದನ್ನು ಯಾವತ್ತೂ ಊಹಿಸರಲಿಕ್ಕಿಲ್ಲ. ಈ ಘಟನೆ ಕೇವಲ ವಿಮಾನ ದುರಂತವಲ್ಲ – ಇದು ವಿಧಿಯ ಆಘಾತಕರ ಆಟ. 1206 ಎಂಬ ಅಂಕಿಯ ಸುತ್ತಾಟವೇ ರೂಪಾಣಿಯವರ ಬದುಕಿನ ಅಂತಿಮ ಅಧ್ಯಾಯವಾಯಿತು.
ನಾವು ನಂಬಿದ ಅಂಕಿಗಳೂ, ನಂಬಿಕೆಯೂ, ಕೆಲವೊಮ್ಮೆ ನಮ್ಮಿಂದ ಅಗೋಚರವಾದ ವಿಧಿಯ ಆಟದಲ್ಲಿ ತಿರುಗಿಹೋಗಬಹುದು. ಜೀವನ ತುಂಬಾ ಅನಿರೀಕ್ಷಿತ ಎಂಬುವುದೇ ಪ್ರತಿಯೊಬ್ಬರ ಆಲೋಚನೆಯಾಗಿದೆ.