West Bengal Election: 2026 ರಲ್ಲಿ ಬಿಜೆಪಿ ಬಾವುಟ ಹಾರಲಿದೆಯೇ ಪಶ್ಚಿಮ ಬಂಗಾಳದಲ್ಲಿ? ಏನು ಹೇಳುತ್ತವೆ ಸಮೀಕ್ಷೆಗಳು?

  • 01 May 2026 12:07:52 AM

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ (West Bengal Legislative Assembly Election) ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಈಗ ಮತಪೆಟ್ಟಿಗೆಯಲ್ಲಿ ಸೀಲ್ಮುದ್ರೆಯಾಗಿದೆ. ರಾಜ್ಯದ ರಾಜಕೀಯ ವಲಯದಲ್ಲಿ ಹಾತೊರತೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಮತದಾನದ ನಂತರ ವಿವಿಧ ಮಾಧ್ಯಮ ಸಂಸ್ಥೆಗಳು ಪ್ರಕಟಿಸಿರುವ ಎಕ್ಸಿಟ್ ಪೋಲ್ ಸಮೀಕ್ಷೆಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ಟಿವಿ ಚರ್ಚೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ–ಪ್ರತ್ಯಾರೋಪಗಳ ನಡುವೆ ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಾಗಿದೆ.

 

2026 ಪಶ್ಚಿಮ ಬಂಗಾಳ ಚುನಾವಣೆ: ಯಾರಿಗೆ ಅಧಿಕಾರದ ಭವಿಷ್ಯ?
ಕೆಲವು ಸಮೀಕ್ಷೆಗಳು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದರೆ, ಇನ್ನೂ ಕೆಲವು ವರದಿಗಳು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ(All India Trinamool Congress (TMC) ಮತ್ತೊಮ್ಮೆ ಅಧಿಕಾರಕ್ಕೇರುತ್ತದೆ ಎಂದು ಸೂಚಿಸಿವೆ. ಬಿಜೆಪಿ(Bharatiya Janata Party (BJP) ಅಧಿಕಾರಕ್ಕೆ ಬಂದರೆ 15 ವರ್ಷದ ಮಮತಾ ಬ್ಯಾನರ್ಜಿ(Mamta Banarjee) ಆಡಳಿತಕ್ಕೆ ಬ್ರೇಕ್ ಬೀಳಲಿದೆ. ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಒಟ್ಟು 294 ಸ್ಥಾನಗಳಿದ್ದು, ಸರ್ಕಾರ ರಚನೆಗೆ ಕನಿಷ್ಠ 148 ಸ್ಥಾನಗಳು ಅಗತ್ಯವಿದೆ.

 

ಏನು ಹೇಳುತ್ತವೆ ಪ್ರಮುಖ ಎಕ್ಸಿಟ್ ಪೋಲ್‌ಗಳು?


ವಿವಿಧ ಮಾಧ್ಯಮ ವರದಿಗಳ ಪ್ರಕಾರ ಹೆಚ್ಚಿನ ಸಮೀಕ್ಷಾ ಸಂಸ್ಥೆಗಳು ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂದು ಸೂಚಿಸಿವೆ. ಆದರೆ ಸಮೀಕ್ಷೆಗಳ ನಿಖರ ವಿಶ್ಲೇಷಣೆ ನೋಡಿದರೆ, ಎರಡು ಪಕ್ಷಗಳ ನಡುವೆ ಭಾರೀ ಪೈಪೋಟಿ ಇರುವುದಾಗಿ ಗೋಚರಿಸುತ್ತದೆ. Matrize ಹಾಗೂ P-Marq ಸಮೀಕ್ಷೆಗಳ ಪ್ರಕಾರ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಈ ಸಮೀಕ್ಷೆಗಳ ಅಂದಾಜು ಪ್ರಕಾರ ಬಿಜೆಪಿಗೆ 146 ರಿಂದ 161 ಸ್ಥಾನಗಳು ದೊರೆಯಬಹುದು, ಟಿಎಂಸಿಗೆ 125 ರಿಂದ 140 ಸ್ಥಾನಗಳು ಸಿಗಬಹುದು ಎಂದು ತಿಳಿಸಿದೆ. ಅದೇ ರೀತಿಯಲ್ಲಿ, Poll Diary ಮತ್ತು JVC ಮುಂತಾದ ಸಮೀಕ್ಷೆಗಳು ಬಿಜೆಪಿಗೆ ಬಹುಮತದ ಅಂಚಿನಲ್ಲಿದೆ ಎಂದು ಸೂಚಿಸಿದರೆ, Janata Polls ಮಾತ್ರ ಟಿಎಂಸಿಗೆ ಸ್ಪಷ್ಟ ಮುನ್ನಡೆ ತೋರಿಸಿದೆ.

 

ಎಲ್ಲಾ ಸಮೀಕ್ಷೆಗಳ ಸರಾಸರಿ ಲೆಕ್ಕಾಚಾರವನ್ನು ಗಮನಿಸಿದರೆ, ಬಿಜೆಪಿ 148 ಮ್ಯಾಜಿಕ್ ಸಂಖ್ಯೆಯನ್ನು ದಾಟುವ ಸಾಧ್ಯತೆ ಇದೆ ಎಂದು ಕೆಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕೆಲವು ಸಮೀಕ್ಷೆಗಳು ಟಿಎಂಸಿಗೆ ಮುನ್ನಡೆ ತೋರಿಸಿರುವುದರಿಂದ ಅಂತಿಮ ಫಲಿತಾಂಶದ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಸಮೀಕ್ಷೆಗಳು ಒಂದು ಕಥೆ ಹೇಳುತ್ತಿವೆ… ಆದರೆ ಮತಪೆಟ್ಟಿಗೆ ತೆರೆದಾಗ ಕಥೆ ಅದೇ ಇರುತ್ತದೆಯೇ? ಕಾದುನೋಡಬೇಕಾಗಿದೆ.