26 September 2026 |

ಪಡೀಲ್ ಕಾರು ಶೋರೂಂನಲ್ಲಿ ಅಗ್ನಿ ಅವಘಡ; ಹಲವು ವಾಹನಗಳಿಗೆ ಹಾನಿ

  • 26 Sep 2026 10:10:22 AM

ಮಂಗಳೂರು: ನಗರದ ಪಡೀಲ್ ಪ್ರದೇಶದಲ್ಲಿರುವ ಕಾರು ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ವಾಹನಗಳು ಹಾನಿಗೊಳಗಾದ ಘಟನೆ ನಡೆದಿದೆ.

 

ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ಕೆಲಕಾಲದ ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

 

ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆಯಿಂದ ಉಂಟಾದ ಹಾನಿಯ ಪ್ರಮಾಣದ ಕುರಿತು ಪರಿಶೀಲನೆ ನಡೆಯುತ್ತಿದೆ.