21 June 2025 | Join group

'ಪದ್ಮವಿಭೂಷಣ' ಭಾರತದ ಪರಮಾಣು ವಿದ್ಯುತ್ ಮಾಜಿ ಅಧ್ಯಕ್ಷ ಡಾ. ಎಂ.ಆರ್. ಶ್ರೀನಿವಾಸನ್ ನಿಧನ

  • 20 May 2025 01:20:44 PM

ಭಾರತದ ಪರಮಾಣು ವಿದ್ಯುತ್ ಮಾಜಿ ಅಧ್ಯಕ್ಷ ಡಾ. ಎಂ.ಆರ್. ಶ್ರೀನಿವಾಸನ್ ತನ್ನ 95 ನೇ ವಯಸಿನಲ್ಲಿ ಸ್ವರ್ಗಸ್ಥರಾಗಿದ್ದಾರೆ. ಭಾರತದ ಪರಮಾಣು ವಿದ್ಯುತ್ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

 

ಮುಂಬೈ ಮೂಲದ ರಾಷ್ಟ್ರೀಯ ವಿಜ್ಞಾನ ಸಂವನಹಕಾರರ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಸುಹಾಸ್ ನಾಯಕ್ ಅವರು ಇವರ ನಿಧನವನ್ನು ದೃಢಪಡಿಸಿದ್ದಾರೆ.

 

ಭಾರತದ ಮೊದಲ ಪರಮಾಣು ಸಂಶೋಧನಾ ರಿಯಾಕ್ಟರ್ ‘ಅಪ್ಸರಾ’ ನಿರ್ಮಾಣದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಪರಮಾಣು ವಿದ್ಯುತ್ ನಿಯೋಗದಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

 

ಡಾ. ಎಂ.ಆರ್. ಶ್ರೀನಿವಾಸನ್ ಅವರ ನಾಯಕತ್ವದಲ್ಲಿ ದೇಶದಾದ್ಯಂತ 18 ಪರಮಾಣು ವಿದ್ಯುತ್ ಘಟಕಗಳನ್ನು ಅಭಿವೃದ್ಧಿಪಡಿಸಲಾಗಿತ್ತು.

 

ಇವರ ಪರಮಾಣು ವಿದ್ಯುತ್ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಭಾರತ ಸರಕಾರ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಿದೆ.