20 June 2025 | Join group

ಕರ್ನಾಟಕದಲ್ಲಿ ತಂಬಾಕು ಸೇವನೆಗೆ ಕಠಿಣ ಕ್ರಮ : ಕಾನೂನು ಬದ್ಧ ವಯಸ್ಸು 21 ಮತ್ತು ಇನ್ನಿತರ ತಿದ್ದುಪಡಿ

  • 31 May 2025 12:27:20 PM

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಮಸೂದೆ 2024 ರ ತಿದ್ದುಪಡಿಗೆ ಅನುಮೋದನೆ ನೀಡಿದ ಪರಿಣಾಮ, ಕರ್ನಾಟಕದ ತಿದ್ದುಪಡಿಯಲ್ಲಿ ಕೆಲವು ಕಾನೂನು ಕ್ರಮಗಳ ಬಗ್ಗೆ ಪ್ರಕಟಣೆಗಳನ್ನು ಜಾರಿಗೊಳಿಸಲಾಗಿದೆ. ರಾಜಸ್ತಾನ, ಮಹಾರಾಷ್ಟ್ರ ಮತ್ತು ಗುಜರಾತ್ ನಂತಹ ರಾಜ್ಯಗಳಲ್ಲಿ ಈಗಾಗಲೇ ಈ ರೀತಿಯ ಕಠಿಣ ಕ್ರಮವನ್ನು ಜಾರಿಗೊಳಿಸಿದ್ದು ಇದೀಗ ಕರ್ನಾಟಕದಲ್ಲೂ ಜಾರಿಯಾಗಲಿದೆ.

 

ಕರ್ನಾಟಕ ಸರಕಾರದ ಹೊಸ ಪ್ರಕಟಣೆಯ ಪ್ರಕಾರ, ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆಗೆ ದಂಡವನ್ನು ರೂ. 200 ದಿಂದ ರೂ. 1000 ಗಳಿಗೆ ಹೆಚ್ಚಿಸಿದೆ. ಇನ್ನು ಮುಂದೆ ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಖರೀದಿಸಲು ಕಾನೂನುಬದ್ದ ವಯಸ್ಸು 18 ರಿಂದ 21 ವರ್ಷ ಆಗಲಿದೆ.

 

ಹೊಸ ತಿದ್ದುಪಡಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಧೂಮಪಾನ ಮತ್ತು ತಂಬಾಕು ತಿಂದು ಉಗುಳುವುದನ್ನು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು. 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗೆ ಈ ಉತ್ಪನ್ನಗಳನ್ನು ಮಾರಾಟಮಾಡುವಂತಿಲ್ಲ. ಈ ಬಗ್ಗೆ ಅಂಗಡಿ ಮಾಲಕರು ಎಚ್ಚರ ವಹಿಸಬೇಕು ಎಂದು ತಿಳಿಸಲಾಗಿದೆ.

 

ಶಿಕ್ಷಣ ಸಂಸ್ಥೆಯಿಂದ 100 ಮೀಟರ್ ಒಳಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದ್ದು, ಕಾನೂನು ಉಲ್ಲಂಘಿಸಿದವರಿಗೆ ರೂ. 1000 ವರೆಗೆ ದಂಡ ವಿಧಿಸಲಾಗುತ್ತದೆ. ಶಾಲಾ ಮಕ್ಕಳಿಗೆ ಸುಲಭವಾಗಿ ಕೈಗೆಟಗದಂತೆ ಈ ಕ್ರಮಗಳನ್ನು ಕೈಗೊಂಡಿದ್ದು, ತಪ್ಪಿತಸ್ಥ ಅಂಗಡಿ ಮಾಲಕರು ದಂಡ ಮತ್ತು ಶಿಕ್ಷೆಗೆ ಒಳಗಾಗಲಿದ್ದಾರೆ.

 

ಪ್ರಮುಖ ಬದಲಾವಣೆಗಳಲ್ಲಿ ಹುಕ್ಕಾ ಬಾರ್‌ಗಳ ಮೇಲಿನ ಸಂಪೂರ್ಣ ನಿಷೇಧವೂ ಸೇರಿದೆ, ಇವುಗಳನ್ನು ಈಗ ಪಬ್‌ಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸಂಸ್ಥೆಗಳಲ್ಲಿ ನಿಷೇಧಿಸಲಾಗಿದೆ. ಹುಕ್ಕಾ ಬಾರ್‌ಗಳನ್ನು ನಿರ್ವಹಿಸುವ ಉಲ್ಲಂಘಿಸುವವರಿಗೆ ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50,000 ರೂ.ಗಳಿಂದ 1 ಲಕ್ಷ ರೂ.ಗಳವರೆಗೆ ದಂಡ ವಿಧಿಸಬಹುದು.