ಪರೀಕ್ಷೆ ತಪ್ಪಿಸಲು ಬಾಂಬ್ ಬೆದರಿಕೆ ಕರೆ: ವೈದ್ಯಕೀಯ ವಿದ್ಯಾರ್ಥಿನಿ ಬಂಧನ, ದೇರಳಕಟ್ಟೆ ಹುಸಿ ಬಾಂಬ್ ಪ್ರಕರಣ ಭೇದಿಸಿದ ಪೊಲೀಸರು

  • 07 Jun 2025 04:17:24 PM

ಮಂಗಳೂರು: ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಕಣಚೂರ್ ಮೆಡಿಕಲ್ ಕಾಲೇಜಿನಲ್ಲಿ ಬಾಂಬ್ ಇಟ್ಟಿದ್ದೇನೆ ಎಂದು ಬೆದರಿಕೆ ಕರೆ ನೀಡಿದ ಪ್ರಕರಣ ಕಾಲೇಜ್ ಮಂಡಳಿ, ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರನ್ನು ಬಹಳ ಆಶ್ಚರ್ಯಚಕಿತರಾಗಿಸಿದೆ.

 

ಸೆಮಿನಾರ್ ನೀಡುವುದನ್ನು ತಪ್ಪಿಸಲು ಒಂದು ಪಿಜಿ ವೈದ್ಯಕೀಯ ವಿದ್ಯಾರ್ಥಿನಿ ಫೋನ್ ಮೂಲಕ ಕಳ್ಳ ಬೆದರಿಕೆ ಕರೆ ಮಾಡಿದ್ದಾಗಿ ಪತ್ತೆಯಾಗಿದೆ. ಜೂನ್ 4ರಂದು ಬೆಳಗ್ಗೆ 8:45ಕ್ಕೆ, "ಆಸ್ಪತ್ರೆಯಲ್ಲಿಯೇ ಬಾಂಬ್ ಇಡಲಾಗಿದೆ" ಎಂಬ ರೀತಿಯಲ್ಲಿ ಐದು ಬೆದರಿಕೆ ಕರೆಗಳು ಬಂದುವು. ಈ ಕರೆಗಳಿಂದ ಆಸ್ಪತ್ರೆಯಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು.

 

ಪೊಲೀಸರು, ಬಾಂಬ್ ಡಿಸ್ಪೊಸಲ್ ತಂಡ ಮತ್ತು ನಾಯಿ ಪಡೆ ಸೇರಿ 10 ಗಂಟೆಗಳ ಕಾಲ ವಿಸ್ತೃತ ಶೋಧ ನಡೆಸಿದರು. ಆದರೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಲಿಲ್ಲ.

ಕಣಚೂರು ವೈದಕೀಯ ಕಾಲೇಜಿಗೆ ಹುಸಿ ಬಾಂಬ್ ಬೆದರಿಕೆ: ಪೊಲೀಸರಿಂದ ತನಿಖೆ

ಆಸ್ಪತ್ರೆಯ ಪಿಜಿ ವಿದ್ಯಾರ್ಥಿನಿ ಡಾ. ಚಾಲಾಸಾನಿ ಮೊನಿಕಾ ಚೌಧರಿ ಪೊಲೀಸರು ಬಳಿ ದೂರು ನೀಡಿದ್ರು. ಆದರೆ ತಾಂತ್ರಿಕ ತನಿಖೆಯ ನಂತರ, ಕರೆ ಮಾಡಿದವಳು ತಾನೇ ಎಂದು ಪತ್ತೆಯಾಗಿದೆ. ಅವರು ಜೂನ್ 7ರಂದು ಬಂಧನಕ್ಕೆ ಒಳಗಾಗಿದ್ದಾರೆ ಮತ್ತು ತಾನು ಬಳಸಿದ ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ.